ಫರತಾಬಾದ:ಮಧುಮೇಹ ಕಿಟ್ ವಿತರಣೆ

ಕಲಬುರಗಿ,ನ.11-ಮನುಷ್ಯ ಬದುಕಿನಲ್ಲಿ ಆರೋಗ್ಯ ರಕ್ಷಣೆ ಪಾತ್ರ ಮಹತ್ವದಾಗಿದ್ದು, ಮಕ್ಕಳಿಂದ ಹಿಡಿದು ವಯೋಸಹಜವಾಗಿ ಕಾಣುವಂತಹ ಮಧುಮೇಹವನ್ನು ನಿರ್ಲಕ್ಷಿಸಬಾರದು ಸರಿಯಾದ ಸೂಕ್ತ ಚಿಕಿತ್ಸೆಯ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಕಟ್ಟಿಕೊಳ್ಳಬಹುದು ಎಂದು ಡಾ.ಸುಚೀತ ಅವಂತಿ ಹೇಳಿದರು.
ಫರತಾಬಾದ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯರೋಗ ನಿರ್ಮೂಲನೆ ಕೇಂದ್ರ ಕಲಬುರಗಿ, ಲಯನ್ಸ್ ಕ್ಲಬ್ ಗುಲ್ಬರ್ಗಾ ನೃಪತುಂಗ ಹಾಗೂ ಸಾಕ್ಷಮ್ ಪ್ರವಾಹ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಹಭಾಗಿತ್ವದಲ್ಲಿ ಮಧುಮೇಹ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದರು.
ಈಗಾಗಲೇ ಎನ್ ಜಿ ಓ ಗಳು ಕೂಡ ನಮ್ಮೊಂದಿಗೆ ಕೆಲಸ ಮಾಡುತ್ತಿವೆ. ಕಫದ ಮಾದರಿ ಸಂಗ್ರಹ ಮಾಡುತ್ತಿದ್ದರೆ. ಪ್ರತಿ ಸ್ಲಾಂ ಏರಿಯಾ ಗುರುತಿಸಿದ ಮನೆಯನ್ನೂ ಬಿಡದೆ ಮಾದರಿ ಸಂಗ್ರಹಿಸುತ್ತಿದ್ದಾರೆ, ಹಾಗೆ ಪ್ರತಿಯೊಬ್ಬರೂ ಕೈ ತೊಳೆಯುವುದರಿಂದ ನಿಮ್ಮನ್ನು ನೀವು ರಕ್ಷಸಿಕೊಳ್ಳಿ ಕೋವಿಡ್-19 ನಿಂದ ಸುರಕ್ಷಿತವಾಗಿರಿ, ಕ್ಷಯರೋಗಿಗಳಿಗೆ ತಿಂಗಳಿಗೆ ನಿಕ್ಷಯ ಪೋಷಣೆ ಯೋಜನೆಯಡಿ 500 ರೂ.ಗಳ ಸಹಾಯಧನ ನೇರ ಕ್ಷಯರೋಗಿ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಡಾ.ಅಶ್ವಿನಿ ಸುಚೀತ ಅವಂತಿ ಹೇಳಿದರು.
ಮಧುಮೇಹಿ ರೋಗಿಗಳಿಗೆ ಕಿಟ್ ವಿತರಿಸುವ ಜೊತೆಗೆ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಉಚಿತ ದಂತ/ ಹಲ್ಲಿನ ಚಿಕಿತ್ಸೆ ಉಚಿತ ಪೇಸ್ಟ್ ವಿತರಿಸಿದರು. ಹಾಗೆಯೇ ಈ ಮಧುಮೇಹ ಮಕ್ಕಳಿಂದ ವಯೋವೃದ್ಧರಿಗೆ ವಂಶ ಪರಂಪರೆಯಾಗಿ ಬರುವಂತಹದು. ಇದನ್ನು ನಿಯಂತ್ರಿಸಬಹುದಾಗಿದ್ದು, ರೋಗಿಗಳು ಜಾಗೃತೆ ವಹಿಸಬೇಕಾದದ್ದು ಬಹಳ ಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಗುಲ್ಬರ್ಗಾ ನೃಪತುಂಗದ ಅಧ್ಯಕ್ಷರಾದ ಲಯನ್ ಅರುಣದೇವಿ ಅವಂಟಿ ಮಾತನಾಡುತ್ತ ನನ್ನ ಮಗನ ಹುಟ್ಟು ಹಬ್ಬ ವಿಶೇಷ ಗ್ರಾಮೀಣ ಜನರ ಮಧ್ಯೆ ಮಾಡುವುದರಿಂದ ಜನರಿಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ಇರುವುದರಿಂದ ಗ್ರಾಮದಲ್ಲಿ ನಮ್ಮಿಂದ ಆಗುವ ಸೇವೆ ಅಲ್ಲಿ ಕಲ್ಪಿಸಬೇಕು ಎಂದು ಜನರು ತಪ್ಪದೆ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆಗಾಗ ಸಾಬೂನಿನಿಂದ , ಕೈ ತೊಳೆದಕೊಂಡಲ್ಲಿ ಮಾತ್ರ ಕೊರೊನಾದಿಂದ ದೂರವಿಡಲು ಸಾಧ್ಯ ಎಂದು ಹೇಳಿದರು. ಮಧುಮೇಹ ಇದ್ದವರಿಗೆ ಹೃದಯ ಆಘಾತ ಬರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಬೇಕಾದದ್ದು ಅಗತ್ಯವಾಗಿದೆ ಎಂದರು.
ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂತೋಷ ಕಾಳಗಿ ಅವರು ಮಾತನಾಡುತ್ತ ಕ್ಷಯರೋಗ ಮುಕ್ತವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯರೋಗಿ ತಪ್ಪದೆ ಡಾಟ್ಸ್ ಸೆಂಟರ್ಗೆ ಬಂದು ಉಚಿತ ಚಿಕಿತ್ಸೆ ಇದೆ ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗಿ ಬಹುಬೇಗ ಗುಣಮುಖನಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ ಸಂತೋಷ ಕುಮಾರ್ ಪಾಟೀಲ್ ಮಾತಾನಾಡಿದರು.
ಲಾಯನ್ಸ ಕ್ಲಬ್ ಕಲಬುರಗಿ ನೃಪತುಂಗದ ಸದಸ್ಯ ಲಯನ್ ಸುಗಣ್ಣ ಅವಂಟಿ, ಡಾ,ಎಂ ಹೆಚ್ ಹೂಗಾರ, ಲಾಯನ್ ರಾಮಕೃಷ್ಣ, ಮಂಜುನಾಥ ಕಂಬಳಿಮಠ, ಜಿಲ್ಲಾ ಡಿ.ಆರ್.ಟಿ.ಬಿ ಸಮಾಲೋಚಕ ಸಕ್ಷಮ್ ಪ್ರವಾಹ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ( ಟಿ,ಐ,ಎಸ್,ಎಸ್ ). ಮಲ್ಲಿಕಾರ್ಜುನ ಛತ್ರೆ, ಎಸ್ ಟಿ ಎಸ್ ಮಹ್ಜರುದ್ದೀನ್, ವಿಜಯಕುಮಾರ ಭೂಸರೆ, ಮೆಹೇಬ್ಹಬ್ ಮತ್ತು ಗ್ರಾಮದ ಫಲಾನುಭವಿಗಳು ಮಕ್ಕಳು ಹಾಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.