ಫಜೀರು ಯುವಜನರಿಂದ ಜಲಬಂಧನ್ ಶ್ರಮದಾನ

ಮಂಗಳೂರು, ನ.೪-ಫಜೀರಿನ ಕಥೊಲಿಕ್ ಯುವ ಸಂಘಟನೆಯಿಂದ ಫಜೀರು ಬಳಿಯ ಪರಂಚಿಲ್ ಎಂಬಲ್ಲಿ ಶ್ರಮಧಾನದ ಮೂಲಕ ಸಮತಲ ಅಗಳುಗಳನ್ನು ನಿರ್ಮಾಣ ನಡೆಸಲಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಗುರು ಒಸ್ವಲ್ಡ್ ಮೊಂತೇರೊರವರು, ಮಳೆ ನೀರು ಕೊಯ್ಲುವಿನ ಒಂದು ಘಟಕವಾಗಿರುವ ಸಮಾಂತರ ಕಂದಕಗಳನ್ನು ತೋಡುವ ಬಗ್ಗೆ ಮಾಹಿತಿ ನೀಡಿದರು. ಯುವಜನರು ಈ ರೀತಿಯ ನೀರಿನ ಸಂರಕ್ಷಣೆಯನ್ನು ಮಂಗಳೂರು ಧರ್ಮಪ್ರಾಂತ್ಯದ “ಜಲಬಂಧನ್ ಕಾರ್ಯಕ್ರಮದ ಅಂಗವಾಗಿ ನಡೆಸಿ, ಸಿಒಡಿಪಿ ಸಂಸ್ಥೆಯ ಸ್ವಾಭಾವಿಕ ಸಂಪನ್ಮೂಲ ರಕ್ಷಣೆಯ ಯೋಜನೆಗೆ ಸಹಕಾರ ನೀಡಿದರು.


ಫಜೀರು ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ| ಸುನಿಲ್ ವೇಗಸ್, ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕರಾದ ಪೀಟರ್ ಡಿ ಸೋಜ ಹಾಗೂ ರೀಟಾ ಡಿ ಸೋಜ, ಕಾರ್ಯಕರ್ತೆಯಾದ ಗುಲಾಬಿ ಮೊಂತೇರೊ ಮತ್ತು ಫಜೀರು ಮೆರ್ಸಿಯಮ್ಮನ ಚರ್ಚ್‌ನ ಐ.ಸಿ.ವೈ.ಎಮ್ ಅಧ್ಯಕ್ಷರಾದ ಪ್ರೀತಂ ಮತ್ತು ಸಂಘಟನೆಯ ೨೫ ಸದಸ್ಯರು ಹಾಜರಿದ್ದರು.
ಈ ಶ್ರಮದಾನದ ಮೂಲಕ ಒಟ್ಟು ೨೭ ಸಮತಲ ಅಗಳುಗಳನ್ನು ತೆಗೆಯಲಾಯಿತು ಹಾಗೂ
೧೨ ಹಣ್ಣು ಹಂಪಲಿನ ಗಿಡಗಳನ್ನು ನೆಡಲಾಯಿತು.