
ದೇವದುರ್ಗ,ಮಾ.೦೪- ಪೊಲೀಸ್ ಇಲಾಖೆಗೆ ಸಮಾಜದಲ್ಲಿ ತನ್ನದೆಯಾದ ಮಹತ್ವ ಹಾಗೂ ಗೌರವವಿದೆ. ಸರ್ಕಾರ ಹಾಗೂ ಜನರು ನಮ್ಮ ಮೇಲೆ ನಂಬಿಕೆ ಇರಿಸಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಪೊಲೀಸರಿಗೆ ಕರ್ತವ್ಯ ಪ್ರಜ್ಞೆ ಹಾಗೂ ನಿಷ್ಠೆಯೇ ಜೀವಾಳವಾಗಬೇಕು ಎಂದು ಪಿಐ ಕೆ.ಹೊಸಕೇರಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪದೋನ್ನತ ಪಡಿದು ವರ್ಗಾವಣೆಗೊಂಡ ಸಿಬ್ಬಂದಿ ಫಕ್ರುದ್ದೀನ್, ಸಂತೋಷ ಹಾಗೂ ಮುರಿಗೆಪ್ಪಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಸಾರ್ವಜನಿಕರಿಗೆ ಕಾನೂನು ಬಗ್ಗೆ ಅರಿವು ಮೂಡಿಸಿ ಸಮಾಜದಲ್ಲಿ ಶಾಂತಿನೆಲೆಸಲು ಪೊಲೀಸರು ಶ್ರಮಿಸಬೇಕಿದೆ. ಕಾನೂನು ಅರಿವು ಇರುವವರು ಅಪರಾಧ ಮಾಡುವುದಿಲ್ಲ.
ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಸಾರ್ವಜನಿಕರು ಮುಕ್ತವಾಗಿ ಭೇಟಿನೀಡಿ ಕಾನೂನಿನ ಬಗ್ಗೆ ಮಾಹಿತಿ ಪಡೆಯಬೇಕು. ಇಲಾಖೆಗೆ ತನ್ನದೆಯಾದ ಗೌರವ, ಶಿಸ್ತು ಇದ್ದು ಇದನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕಿದೆ. ಸಮಾಜ ಕಾಯುವ ಇಲಾಖೆಯಾಗಿ ಕೆಲಸ ಮಾಡಬೇಕು. ಜನರ ನಡುವೆ ಪ್ರೀತಿ, ವಿಶ್ವಾಸ ಮೂಡಿಸಬೇಕು. ಅಪರಾಧಗಳು ನಡೆಯದಂತೆ ತಡೆಯಲು ಸಾರ್ವಜನಿಕರು ಕೂಡ ಪೊಲೀಸರ ಜತೆ ಕೈಜೋಡಿಸಬೇಕು. ಅಪರಾಧ ನಡೆಯುವಾಗ ನಮಗೆ ಮಾಹಿತಿ ನೀಡಿದರೆ ಶಾಂತಿಕಾಪಾಡುತ್ತೇವೆ ಎಂದರು.
ಕನ್ನಡ ಜನಜಾಗೃತಿ ವೇದಿಕೆ ಅಧ್ಯಕ್ಷ ಅಮ್ಜಾದ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಸಿಬ್ಬಂದಿ ಮಹಿಬೂಬ್ ಪಾಷಾ, ಸಿದ್ದಪ್ಪ, ದೇವಣ್ಣ, ಬಸವರಾಜ್, ಪ್ರೇಮಾ, ಶೋಭಾ, ಪ್ಯಾರಿ ಬೇಗಂ ಇತರರಿದ್ದರು.