ಪ.‌ಬಂಗಾಳ ಚುನಾವಣೆ: ಬಾಂಬ್ ದಾಳಿ ಓರ್ವ ಸಾವು

ಕೊಲ್ಕತ್ತಾ, ಮಾ. 27- ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣಾ ವೇಳೆ ವ್ಯಾಪಕ‌ ಹಿಂಸಾಚಾರ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾನೆ.
ಕಿಡಿಗೇಡಿಗಳು ಮತಗಟ್ಬೆ‌ ಬಳಿ ಬಾಂಬ್ ದಾಳಿ ನಡೆದಿಸಿದ್ದಾರೆ. ಇದರಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಘಟನೆಯಲ್ಲಿ ಪೊಲೀಸರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ‌ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಮ್ಮ ಪಕ್ಷದ ಕಾರ್ಯ ಕರ್ತರನ್ನು ಟಿಎಂಸಿ ಗೂಡಾಂಗಳು ಹತ್ಯೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲಿಪ್ ಘೋಷ್ ಆಪಾದಿಸಿದ್ದಾರೆ.
ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಉಮೇದುವಾರರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
1960ನೇ ರಿಂದಲೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಪ್ರಕರಣಗಳು ನಡೆಯುತ್ತಲೆ ಇವೆ.‌ ಇದುವರೆಗೆ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇತ್ತೀಚಿನ ಚುನಾವಣಾ ಪ್ರಚಾರ‌ ಸಂದರ್ಭದಲ್ಲೂ ಹಿಂಸಾಚಾರ ಸಂಭವಿಸಿತ್ರು.