ಪ.ಮಲ್ಲೇಶ್ ವಿರುದ್ಧ ವಿಪ್ರ ಸಮಾಜ ಪ್ರತಿಭಟನೆ

ಹುಣಸಗಿ,ನ.22-ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿಯನ್ನು ಸರಕಾರ ಶೀಘ್ರವೇ ಬಂಧಿಸಬೇಕೆಂದು ಹುಣಸಗಿಯಲ್ಲಿ ತಾಲೂಕ ಬ್ರಾಹ್ಮಣ ಸಂಘದವರಿದ ತಹಶೀಲ್ದಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬ್ರಾಹ್ಮಣ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು. 6 ದಿನಗಳ ಹಿಂದೆ ಮೈಸೂರಿನ ರಾಮ ಗೋವಿಂದ ರಂಗಮಂದಿರದಲ್ಲಿ ನಡೆದ ಸಿದ್ದರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣ ಸಮಾಜಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳ ಆಪ್ತ ಪ.ಮಲ್ಲೇಶ್ ಅವರ ವಿವಾದಿತ ಹೇಳಿಕೆ ವಿರೋಧಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕ ಬ್ರಾಹ್ಮಣ ಸಂಘದಿಂದ ಕಪ್ಪುಪಟ್ಟಿ ಧರಿಸಿ ತಹಶೀಲ್ ಕಚೇರಿ ವರೆಗೂ ಸರತಿ ಸಾಲಿನೊಂದಿಗೆ, ಮೌನ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ತಾಲೂಕ ವಿಪ್ರ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಶಪಾಂಡೆ ಮಾತನಾಡಿ, ಬ್ರಾಹ್ಮಣ ಸಮುದಾಯದ ಆಚಾರ-ವಿಚಾರ ಪದ್ಧತಿ ಹಾಗೂ ಧಾರ್ಮಿಕತೆಯ ಕುರಿತಾಗಿ ಇಲ್ಲ ಸಲ್ಲದ ಹೇಳಿಕೆ ನೀಡಿ ಸಮುದಾಯಕ್ಕೆ ಅವಮಾನಿಸಿದ್ದು. ಈ ಕೂಡಲೇ ಪ.ಮಲ್ಲೇಶ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹೇಳಿಕೆಯಿಂದಾಗಿ ಸಮಸ್ತ ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟಾಗಿದೆ. ಆದ್ದರಿಂದ ಸಿದ್ದರಾಮಯ್ಯನವರು ಕೂಡ ಹೇಳಿಕೆ ಬಗ್ಗೆ ವಿರೋಧಿಸದೆ ಅನುಮೋದಿಸಿದ್ದು, ಸಂವಿಧಾನಾತ್ಮಕ ನಡೆ ಅಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿ ಮಲ್ಲೇಶ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಉಮಾಕಾಂತ ಭಟ್ ಕೂಡಲಗಿ ಮಾತನಾಡಿ, ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹಿಯಾಳಿಸಿ ಮಾತನಾಡುವುದು ಕಾನೂನು ಬಾಹಿರವಾಗಿದ್ದು. ಹೀಗಾಗಿ ಸಮಾಜದ ಶಾಂತಿಯನ್ನು ಹಾಳು ಮಾಡಲು ಯತ್ನಿಸಿದ ಪ. ಮಲ್ಲೇಶ್‍ನನ್ನು ಶೀಘ್ರವೇ ಬಂಧಿಸಬೇಕು ಎಂದು ಸಿಎಂ ಹಾಗೂ ಗೃಹಮಂತ್ರಿ ಅವರಿಗೆ ಒತ್ತಾಯಿಸಿದರು.ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ ಜಗದೀಶ. ಚೌರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಶಾಮಾಚಾರ್ಯ ಜೋಶಿ, ಮನೋಹರರಾವ್ ಕುಲಕರ್ಣಿ ದ್ಯಾಮನಾಳ, ಗೋವಿಂದರಾವ್ ಜಾಹಗೀರದಾರ, ಲಕ್ಷ್ಮೀಕಾಂತ ಜಮದರಖಾನಿ. ನರಸಿಂಹರಾವ ಕನ್ನಳ್ಳಿ, ಸುರೇಶ ಕುಲಕರ್ಣಿ, ನರಸಿಂಹರಾವ್ ಜಹಾಗಿರದಾರ, ಬಾಲಚಂದ್ರ ಕುಲಕರ್ಣಿ, ರಾಘವೇಂದ್ರ ಪುರೋಹಿತ, ವೆಂಕಟೇಶ ಜೋಶಿ, ವಿನಾಯಕ ದೇಶಪಾಂಡೆ, ಸತ್ಯನಾರಾಯಣ ಕುಲಕರ್ಣಿ, ಗುರುರಾಜಾಚಾರ್ಯ ಜೋಶಿ, ದತ್ತಾತ್ರೆಯ ರಾಜನಕೋಳೂರು, ಶಶಿಕಾಂತ ದೇಸಾಯಿ, ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.