ಪ. ಮಲ್ಲೇಶ್ ವಿರುದ್ಧ ಜಿಲ್ಲಾ ಬ್ರಾಹ್ಮಣ ಸಂಘದಿಂದ ಎಫ್‍ಐಆರ್ ದಾಖಲು-ನ.22 ರಂದು ಪ್ರತಿಭಟನೆ

ಚಾಮರಾಜನಗರ, ನ.20:- ಮೈಸೂರಿನಲ್ಲಿ ನಡೆದ ಸಿದ್ದರಾಮಯ್ಯ 75 ಎಂಬ ಕೃತಿ ಬಿಡುಗಡೆ ಕಾರ್ಯಕ್ರಮÀದಲ್ಲಿ ಪ. ಮಲ್ಲೇಶ್ ಬ್ರಾಹ್ಮಣ ಸಮಾಜದ ವಿರುದ್ದ ಅವಹೇಳನ ಕಾರಿಯಾಗಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನ್ನು ಸಹ ಟೀಕೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದು, ಇವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು.
ನಗರದ ಪಟ್ಟಣ ಠಾಣೆ ಪೊಲೀಸ್‍ಗೆ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ನೇತೃತ್ವದಲ್ಲಿ ತೆರಳಿದ ಪದಾಧಿಕಾರಿಗಳು ಪ. ಮಲ್ಲೇಶ್ ವಿರುದ್ದ ಜನಾಂಗ ನಿಂದನೆ, ದ್ವೇಷ ಪ್ರಚೋದನೆ ಭಾಷಣ, ಸರ್ವೋಚ್ಚ ನ್ಯಾಯಾಲಯ ದುರ್ಬಲ ವರ್ಗದವರಿಗೆ ನೀಡಿರುವ ಶೇ. 10 ಮೀಸಲಾತಿ ಆದೇಶವನ್ನು ಎತ್ತಿ ಹಿಡಿದಿರುವುದನ್ನು ಪ್ರಶ್ನೆ ಮಾಡಿ ನ್ಯಾಯಾಂಗವನ್ನು ನಿಂದಿಸಿದ್ದಾರೆ. ಈ ಕೂಡಲೇ ಇವರ ವಿರುದ್ದ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಎಂ. ಹೆಗಡೆ, ಖಜಾಂಚಿ ಎಸ್. ಬಾಲಸುಬ್ರಮಣ್ಯ, ಮೈಸೂರಿನ ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ನ. 15 ರಂದು ಸಿದ್ದರಾಮಯ್ಯ 75 ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಪ. ಮಲ್ಲೇಶ್ ಅವರು ಸರ್ವೋಚ್ಚ ನ್ಯಾಯಾಲಯದ ನೀಡಿರುವ ಶೇ. 10 ಮೀಸಲಾತಿಯನ್ನು ಸಂವಿಧಾನತ್ಮಕವಾಗಿದೆ ಎಂದು ಘೋಷಣೆ ಮಾಡಿದೆ. ಆದರೆ ಪ. ಮಲ್ಲೇಶ್ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಟೀಕೆ ಮಾಡಿದ್ದಾರೆ. ಬ್ರಾಹ್ಮಣರನ್ನು ನಂಬಬೇಡಿ, ಬ್ರಾಹ್ಮಣರು ಕಳ್ಳ ನನ್ನ ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ರಾಹ್ಮಣ ಸಮಾಜಕ್ಕೆ ನೋವು ಉಂಟು ಮಾಡಿದ್ದಾರೆ. ಈ ಕೂಡಲೇ ಅವರ ಹೇಳಿಕೆಯನ್ನು ವಾಪಸ್ ಪಡೆದುಕೊಂಡು ಸಮಾಜವನ್ನು ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಶಾಂತಿ ನೆಮ್ಮದಿ ಹಾಳು ಮಾಡುವ ಪ್ರಯತ್ನ ಇದಾಗಿದ್ದು, ಇವರ ವಿರುದ್ದ 153ಎ, 295, 295ಎ ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ. 22 ರಂದು ಪ್ರತಿಭಟನೆ : ಬ್ರಾಹ್ಮಣರ ವಿರುದ್ದ ಪ. ಮಲ್ಲೇಶ್ ನೀಡಿರುವ ಹೇಳಿಕೆಯನ್ನು ಖಂಡಿಸಿ, ಜಿಲ್ಲಾ ಬ್ರಾಹ್ಮಣ ಸಂಘದಿಂದ ನ. 22 ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನ ತಲುಪಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಸಮಾಜ ಬಂಧುಗಳು, ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸÀಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಸಿ ಎಚ್.ವಿ. ನಾಗರಾಜು, ಸತೀಶ್‍ರುದ್ರಭೂಮಿ, ಚಂದ್ರಶೇಖರ್, ಪ್ರಸಾದ್, ಸತೀಶ್, ಸುದರ್ಶನ್, ಎ. ಜಯಸಿಂಹ, ಪ್ರತಾಪ್, ಕೇಶವಮೂರ್ತಿ ಮೊದಲಾಧವರು ಇದ್ದರು.