ಪ.ಬಂಗಾಳ, ಅಸ್ಸಾಂ ನಾಳೆ ಮೊದಲ ಹಂತದ ಮತದಾನ

ನವದೆಹಲಿ, ಮಾ. ೨೬- ಪಂಚರಾಜ್ಯಗಳ ವಿಧಾನಸಭೆಯ ಪೈಕಿ ಮೊದಲ ಹಂತದಲ್ಲಿ ಪಶ್ಚಿಮಬಂಗಾಳದ ೩೦ ಮತ್ತು ಅಸ್ಸಾಂ ನ ೪೭ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.

ಅಸ್ಸಾಂ ನ ೪೭ ಕ್ಷೇತ್ರಗಳಿಗೆ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆ ತನಕ ಹಾಗೂ ಪಶ್ಚಿಮಬಂಗಾಳದ ೩೦ ಕ್ಷೇತ್ರಗಳಿಗೆ ೮ ಗಂಟೆಯಿಂದ ಸಂಜೆ ೬ ಗಂಟೆಯ ತನಕ ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳದ ಮಿಡ್ನಾಪೂರ್, ಬಂಕಾಪುರ್,ಪುರಿಲಿಯಾ ಸೇರಿದಂತೆ ವಿವಿಧ ಜಿಲ್ಲೆಯ ೩೦ ಕ್ಷೇತ್ರಗಳಿಗೆ ೮ ಗಂಟೆಯಿಂದ ಮತದಾನ ಆರಂಭವಾಗಿದೆ

ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದಿನ ಕಣವಾಗಿ ೮ ಹಂತಗಳಲ್ಲಿ ಚುನಾವಣೆ ನಡೆಯಲಿದೆ ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಹಿಡಿಯಬೇಕು ಎಂದು ಕನಸು ಕಾಣುತ್ತಿರುವ ಬಿಜೆಪಿ ೮ ಹಂತಗಳಲ್ಲಿ ಚುನಾವಣೆ ನಡೆಯುವಂತೆ ನೋಡಿಕೊಂಡಿದೆ. ಈಗಾಗಲೇ ಸಿ ವೋಟರ್ ಸಮೀಕ್ಷೆ ನಡೆಸಿದ ಪ್ರಕಾರ ಆಡಳಿತರೂಢ ಟಿಎಂಸಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿಸಿದೆ

೨೯೪ ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ೩೦ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ

ಅಸ್ಸಾಂ ನಲ್ಲಿ ಮೊದಲ ಹಂತದಲ್ಲಿ ೪೭ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ೧೨ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ ಆಡಳಿತರೂಢ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ ಕಾಂಗ್ರೆಸ್ ನೇತೃತ್ವದ ಎಐಯುಡಿಎಫ್ ಪಕ್ಷ ಕಳೆದುಕೊಂಡಿರುವ ಅಧಿಕಾರವನ್ನು ಮತ್ತೆ ಪಡೆಯುವ ತವಕದಲ್ಲಿ ಹೋರಾಟ ಆರಂಭಿಸಿದೆ

ಮೊದಲ ಹಂತದಲ್ಲಿ ಸರಿ ಸುಮಾರು ೮೧ ಲಕ್ಷ ಅರ್ಹ ಮತದಾರರು ಮತ ಚಲಾಯಿಸಲು ಸಜ್ಜಾಗಿದ್ದಾರೆ ಈ ಪೈಕಿ ೪೦ ಲಕ್ಷ ಮಹಿಳೆಯರು ಮತ್ತು ೪೦ ಲಕ್ಷ ಮತದಾರರು ಇದ್ದಾರೆ.

೧೧೫೩೭ ಮತಗಟ್ಟೆಗಳಲ್ಲಿ ಮೊದಲ ಹಂತದ ಮತಚಲಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ

ಬಿಗಿ ಭದ್ರತೆ:

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಾಳೆ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ರಾಜ್ಯ ಪೊಲಿಸರ ಜೊತೆಗಡ ಕೇಂದ್ರೀಯ ಮೀಸಲು ಪಡೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಆರಂಭದಿಂದಲೂ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.