ಪ.ಬಂಗಾಳದಲ್ಲಿ ಕೇಸರಿ ಬಿರುಸಿನ ಪ್ರಚಾರ

ಕೋಲ್ಕತ್ತಾ,ಏ.೧೧- ಶತಾಯಗತಾಯ ಪಶ್ಚಿಮಬಂಗಾಳದಲ್ಲಿ ಈ ಬಾರಿ ಕೇಸರಿ ಬಾವುಟ ಹಾರಿಸಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ಜನರ ಮನ ಗೆಲ್ಲಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ
ಪಶ್ಚಿಮ ಬಂಗಾಳದಲ್ಲಿ ೪ಹಂತದ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು ಇನ್ನು ನಾಲ್ಕು ಹಂತದ ಮತದಾನ ಬಾಕಿ ಇರುವಂತೆ ಜನರ ಮನಗೆಲ್ಲಲು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದಾರೆ.
ಐದನೇ ಹಂತದ ಮತದಾನ ನಡೆಯುವ ೬ ಕಡೆಗಳಲ್ಲಿ ಅಮಿಷಾ ಅವರು ಮತ ಯಾಚಿಸುವ ಮೂಲಕ ಪಶ್ಚಿಮ ಬಂಗಾಳದ ಜನರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.
ಇಂದು ಬೆಳಗ್ಗೆ ಶಾಂತಿಪುರ ಮತ್ತು ರಾಣಾ ಘಾಟ್ ದಕ್ಷಿಣ ಭಾಗದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಮಧ್ಯಾಹ್ನದ ಬಳಿಕ ಬಸೀರತ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ
ಸಂಜೆ ಪಾಟಿ ಹಟಿ,ಕಮರ್ ಹಟಿ, ರಾಜಾಘಾಟ್ ಗೋಪಾಲ್ ಪುರ, ಮತ್ತಿತರ ಕಡೆ ರೋಡ್ ಶೋ ನಡೆಸುವ ಮೂಲಕ ಜನರ ಮನಗೆಲ್ಲಲು ಮುಂದಾಗಿದ್ದಾರೆ.
ಐದನೇ ಹಂತದಲ್ಲಿ ಏಪ್ರಿಲ್ ೧೭ರಂದು ೪೫ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಪ್ರಿಲ್ ೨೨ರಂದು ೪೩ ಕ್ಷೇತ್ರಗಳಿಗೆ ಆರನೇ ಹಂತ, ಏಪ್ರಿಲ್ ೨೬ರಂದು ೩೫ ಕ್ಷೇತ್ರಗಳಿಗೆ ಹಂತ ಹಾಗೂ ಎಂಟನೇ ಹಾಗೂ ಕೊನೆಯ ಅಂತ ಎಪ್ರಿಲ್ ೨೯ರಂದು ಉಳಿದ ೩೫ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಮೇ ತಿಂಗಳ ೨ ರಂದು ಮತ ಎಣಿಕೆ ನಡೆಯಲಿದೆ.

ಇದೇ ವೇಳೆ ಚುನಾವಣೆ ನಡೆದ ಅಸ್ಸಾಂ ಕೇರಳ ತಮಿಳುನಾಡು ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ, ಕರ್ನಾಟಕ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆಯ ಉಪ ಚುನಾವಣೆಗಳ ಮತ್ತೆ ಎಣಿಕೆ ಕೂಡ ಮೇ ತಿಂಗಳ ೨ ರಂದು ನಡೆಯಲಿದೆ