ಪ.ಪ‌ಂ ಕಾಂಗ್ರೆಸ್ ಮಡಿಲಿಗೆ, ಪ್ರತಾಪ್ ಪಾಟೀಲ‌ಗೆ‌ ಮುಖ ಭಂಗ

ಸಿಂಧನೂರು.ನ.4- ತುರವಿಹಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ‌,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದು ಪಟ್ಟಣ ಪಂಚಾಯತಿ ಕಾಂಗ್ರೆಸ್ ‌ವಶವಾಗಿದ್ದು ಮಾಜಿ‌ ಶಾಸಕ ‌ಪ್ರತಾಪ್ ಪಾಟೀಲ್‌ಗೆ ಮುಖಭಂಗವಾಗಿದೆ.
ಪಟ್ಟಣ ಪಂಚಾಯತಿಯಲ್ಲಿ 14 ಸದಸ್ಯರಲ್ಲಿ, ಕಾಂಗ್ರೆಸ್ 10, ಬಿಜೆಪಿ 3 ಇದ್ದು ಅದರಲ್ಲಿ ‌ಒಬ್ಬ ಸದಸ್ಯ ಮರಣ ಹೊಂದಿದ‌ ಕಾರಣ 13 ಸದಸ್ಯರ ಬಲದಲ್ಲಿ 10 ಸದಸ್ಯರನ್ನು ಹೊಂದಿದ ಕಾಂಗ್ರೆಸ್ ಅಧಿಕಾರಕ್ಕೆ ಬರಲು‌ ಸರಳವಾಗಿತ್ತು.
ಇಂದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಚುನಾವಣೆ ನಿಗದಿ ಯಾಗಿದ್ದು ಬೆಳಿಗ್ಗೆ 10. ಗಂಟೆಗೆ ನಾಮಪತ್ರ ಪ್ರಕ್ರಿಯೆ ಆರಂಭಗೊಂಡಿದ್ದು ವಾರ್ಡ ನಂ -14 ಸದಸ್ಯರಾದ ನಾಗರತ್ನ ಕುಮಾರಿ ಗಂ ಜಗನ್ನಾಥ ಅಧ್ಯಕ್ಷ ಸ್ಥಾನಕ್ಕಾಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ‌ ಪಕೀರಮ್ಮ ಗಂ ದೊಡ್ಡಪ್ಪ ನಾಯಕ‌ ನಾಮಪತ್ರ ಸಲ್ಲಿಸಿದ್ದು ,ಇವರನ್ನು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ನಾಮಪತ್ರಗಳು ಕ್ರಮಬದ್ದ ವಾಗಿದ್ದು ಸಾಮಾನ್ಯ ವರ್ಗಕ್ಕೆ ಮಿಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನಾಗರತ್ನ ಕುಮಾರಿ ಗಂ ಜಗನ್ನಾಥ ಅಧ್ಯಕ್ಷರಾಗಿ ,ಪರಿಶಿಷ್ಟ ಪಂಗಡಕ್ಕೆ ಮಿಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪಕೀರಮ್ಮ ಗಂ ದೊಡ್ಡಯ್ಯ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಮಂಜುನಾಥ ಭೋಗಾವತಿ ಅಧಿಕೃತವಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಜಿಬಾಬು ಹಾಜರಿದ್ದರು.
ಕಾಂಗ್ರೆಸ್ ಪಕ್ಷದ ‌ಸದಸ್ಯರು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಟ್ಟಣ ಪಂಚಾಯತಿ ಮುಂದೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು.
ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಮಾಜಿ‌ ಶಾಸಕ ‌ಪ್ರತಾಪ್ ಪಾಟೀಲರ ಬೆಂಬಲಿಗರು ಗೆದ್ದಿದ್ದು ಈಗ ಪಾಟೀಲ ರು ಬಿಜೆಪಿ ಗೆ ಹೋದ ಕಾರಣ ಗೆದ್ದ ಪಾಟೀಲರ ಬೆಂಬಲಿಗ ಸದಸ್ಯರು ‌ಬಿಜೆಪಿಗೆ‌ ಹೋಗದೆ ಕಾಂಗ್ರೆಸ್ ನಲ್ಲಿದ್ದು ಪಟ್ಟಣ ಪಂಚಾಯತಿಯನ್ನು ಬಿಜೆಪಿ ಗೆ ಬಿಟ್ಟು ಕೊಡದೆ ಕಾಂಗ್ರೆಸ್ ವಶ ಮಾಡಿಕೊಂಡು ಪಾಟೀಲರ ‌ಬೆಂಬಲಿಗ ಹಾಗೂ ಅದ್ಯಕ್ಷ ಆಕಾಂಕ್ಷಿ ಪಲ್ಲವಿ ಗಂ ಶರಣಬಸವ ಗೆ ಅದ್ಯಕ್ಷ ಆಗುವದನ್ನು ತಡೆದ ಕಾರಣ ಪ್ರತಾಪ್ ಪಾಟೀಲ ಹಾಗೂ ಅವರ ಬೆಂಬಲಿಗ ಶರಣಬಸವ ಸಕ್ಕರಿ ತೀವ್ರ ಹಿನ್ನೆಡೆ ಆಗಿ ಮುಖಭಂಗ ಅನುಭವಿಸಿರುವದು ಕಂಡು ಬಂತು .
ಕಾಂಗ್ರೆಸ್ ಮುಖಂಡರಾದ ಕೆ.ಕರಿಯಪ್ಪ, ಮಲ್ಲನಗೌಡ ದೇವರಮನಿ, ಫಾರುಕ್ ಸಾಬ‌, ನಿಂಗಪ್ಪ ಕಟ್ಟಿಮನಿ ,ಉಮರ್ ಸಾಬ,ಮೌಲಪ್ಪಯ್ಯ, ಶಾಮಿದ ಸಾಬ್ , ಅಮರೇಗೌಡ, ಹನುಮಂತಪ್ಪ ಮುದ್ದಾಪುರ, ಮಹಿಬೂಬ ಮುದ್ದಾಪುರ, ಶೇಖರಗೌಡ ದೇವರಮನಿ, ಹನುಮೇಶ ಬಾಗೋಡಿ, ಬಾಪುಗೌಡ, ದೇವರಮನಿ,ಹನುಮಂತಗೌಡ ,ಅಬು ತುರಾಬ್, ಶರಣಯ್ಯ ಸ್ವಾಮಿ ,ಕರಿಯಪ್ಪ ಟೇಲರ್,ಭೀಮದಾಸ ಜೆಡಿಎಸ್ ಮುಖಂಡರಾದ ದಾಸರಿ ಸತ್ಯನಾರಾಯಣ ಬಿಜೆಪಿ ಮುಖಂಡ ಸಿದ್ದನಗೌಡ ತುರವಿಹಾಳ,ಸೇರಿದಂತೆ ಇತರ ಮುಖಂಡರು ನೂತನ ಅದ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿ ಆರೈಸಿದರು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತುರವಿಹಾಳ ಪಿಎಸ್ಐ ‌ಯರಿಯಪ್ಪ ಅಂಗಡಿ ಸೂಕ್ತ ಬಂದ್ ಬಸ್ತ್ ವ್ಯವಸ್ಥೆ ಮಾಡಿ ಶಾಂತ ರೀತಿ ಚುನಾವಣೆಗೆ ಅವಕಾಶ ಮಾಡಿಕೊಟ್ಟರು.