ಪ.ಪಂ.ಸದಸ್ಯ ಭೂಪನಗೌಡರಿಗೆ ಪತ್ನಿ ವಿಯೋಗ

ಸಿರವಾರ,ಜೂ.೧೦-
ಇಲ್ಲಿನ ಪಟ್ಟಣ ಪಂಚಾಯತ್ ನ ೧೧ ನೇ ವಾರ್ಡ್ ಸದಸ್ಯ ವೈ.ಭೂಪನಗೌಡ ಅವರ ಧರ್ಮಪತ್ನಿ ವೈ.ಸುಮಿತ್ರಾ (೪೦) ಅವರು ಶುಕ್ರವಾರ ರಾತ್ರಿ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು.
ಮೃತರಿಗೆ ಪತಿ, ಒಬ್ಬ ಪುತ್ರಿ, ಇಬ್ಬರು ಪುತ್ರರು ಇದ್ದಾರೆ.
ಮೃತರ ಅಂತಿಮ ದರ್ಶನವನ್ನು ಪಟ್ಟಣದ ಅವರ ಸ್ವಗೃಹದಲ್ಲಿ ಏರ್ಪಡಿಸಲಾಗಿತ್ತು. ಅಂತ್ಯಕ್ರಿಯೆಯು ಮಧ್ಯಾಹ್ನದ ನಂತರ ಸ್ವಗ್ರಾಮ ದೇವದುರ್ಗ ತಾಲೂಕಿನ ಯರಮರಸ್ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.