ಪ.ಪಂ.ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ

ಹನೂರು: ಏ.30: ಪಟ್ಟಣದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪ.ಪಂ.ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆಯನ್ನು ಕೈಗೊಳ್ಳಲಾಗಿತ್ತು.
ಪಟ್ಟಣದ ಖಾಸಗಿ ಬಸ್ ಬಸ್ ನಿಲ್ದಾಣ, ಪ.ಪಂ.ಕಾರ್ಯಾಲಯ ಹಾಗೂ ಅಂಗಡಿಮುಂಗಟ್ಟುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ.ಪಂ.ವಾಹನದ ಮೂಲಕ ಸಿಂಪಡಣೆಯನ್ನು ಮಾಡಲಾಯಿತು.
ಸಾಮಾಜಿಕ ಅಂತರ ಮರೆತ ವರ್ತಕರು ಹಾಗೂ ಜನತೆ: ಲಾಕ್‍ಡೌನ್ ಘೋಷಣೆ ಮಾಡಿದ್ದರೂ ಕೂಡ ಕೊವಿಡ್ ಸೋಂಕು ಪ್ರತಿದಿನ ಉಲ್ಭಣಗೊಳ್ಳುತ್ತಿದ್ದು, ವರ್ತಕರು ಹಾಗೂ ಸಾರ್ವಜನಿಕರು ಮುಂಜಾನೆಯಿಂದ ಬೆಳಿಗ್ಗೆ 10 ಗಂಟೆವರೆಗೆ ವ್ಯಾಪಾರ ವಹಿವಾಟಿನ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಇರುವುದು ಕಂಡು ಬಂದಿದ್ದು, ವರ್ತಕರು ಗ್ರಾಹಕರು ಸೇರಿದಂತೆ ಸಾರ್ವಜನಿಕರು ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದೇ ಇದ್ದರೆ ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಲಿರುವ ಆತಂಕ ಎದುರಾಗುವಂತಾಗಿದೆ.
ಈ ಬಗ್ಗೆ ಪ.ಪಂ.ಮುಖ್ಯಾಧಿಕಾರಿ ಮೂರ್ತಿ ಮಾತನಾಡಿ, ಯಾವ ಅಂಗಡಿಗಳು ಹಾಗೂ ಗ್ರಾಹಕರು ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದಿಲ್ಲವೋ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.