
ಸಿರವಾರ,ಮಾ.೧೫. ೨೦೨೩-೨೪ನೇ ಸಾಲಿನ ಆಯ್ಯಾವ್ಯಯ ಬಜೆಟ್ ಸಾರ್ವಜನಿಕರ, ಪ.ಪಂ.ಸದಸ್ಯರ ಗಮನಕ್ಕೆ ಇಲ್ಲದೆ ತರಾತುರಿಯಲ್ಲಿ ಪ.ಪಂ.ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಆಡಳಿತಾಧಿಕಾರಿ, ತಹಸೀಲ್ದಾರ ಸುರೇಶ ವರ್ಮ ಬಜೆಟ್ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ.
ಕಳೆದ ವರ್ಷ ಸಾರ್ವಜನಿಕ ಸಭೆಯ ಮೂಲಕ ತಿಳಿಸಿದ ಸಾರ್ವಜನಿಕ ಉದ್ಯಾನವನ, ವಿವಿಧ ವಾರ್ಡ್‌ಗಳ ಮೂಲಭೂತ ಸೌಕರ್ಯಗಳ ತಿಳಿಸಲಾಗಿತ್ತು. ಅವು ಇಲ್ಲಿಯವರೆಗೂ ಜಾರಿಗೆ ಬಂದಿಲ್ಲಾ, ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲಾ, ನಗರೋತ್ಥಾನದ ೫ಕೋಟಿ ಅನುದಾನ ಬಳಕೆಯಾಗಿಲ್ಲ, ಯಾವುದೇ ಆಶ್ರಯ ಮನೆಗಳು ಇಲ್ಲಾ, ಪ.ಪಂ.ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲಾ ಇದರಿಂದ ಅಧಿಕಾರಿಗಳದ್ದೇ ಕಾರ್‌ಬಾರ್, ಪ.ಪಂ.ಗೆ ಮುಖ್ಯಾಧಿಕಾರಿ ಸರಿಯಾಗಿ ಬರುತ್ತಿಲ್ಲಾ, ಸದಸ್ಯರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲಾ, ಪ.ಪಂ.ಕೆಲಸ ಕಾರ್ಯಗಳು ಆಗುತ್ತಿಲ್ಲಾ, ಯಾವುದೇ ದಾಖಲೆಯನ್ನು ಪಡೆಯಲು ಸಾರ್ವಜನಿಕರು ಹಣವನ್ನು ನೀಡಬೇಕು.
ಕಚೇರಿಗೆ ಪದೇ ಪದೇ ಅಲೆಯಬೇಕಾಗಿದೆ. ಇನ್ನಾದರು ರಾಯಚೂರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಪ.ಪಂ.ಸಮಸ್ಯೆಗಳನ್ನು ಪರಿಹರಿಸಿ, ಮುಖ್ಯಾಧಿಕಾರಿ ಮೇಲೆ ಸೂಕ್ತ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು.