ಸಿರವಾರ,ಮಾ.೨೬- ಪಟ್ಟಣ ಪಂಚಾಯತ ೨೦೨೩-೨೪ನೇ ಸಾಲಿನ ಬಜೆಟ್ ಪೂರ್ವ ಭಾವಿಸಭೆ ನಡೆಯಿತು.
ಮೊದಲಿಗೆ ಪ.ಪಂ.ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಮಾತನಾಡಿ ಸರಕಾರದಿಂದ ಬರುವ, ನರೋತ್ಥಾನ, ೧೫,೧೪ನೇ ಹಣಕಾಸು, ಎಸ್ ಎಫ್ ಸಿ, ವಿಶೇಷ ಅನುದಾನವನ್ನು ಪಡೆಯಲು ಅನುಮೋದನೆ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಕಳಿಸಲಾಗುತ್ತದೆ, ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು, ಸಾರ್ವಜನಿಕರಿ, ವಾರ್ಡ ನಿವಾಸಿಗಳಿಗೆ ಅನುಕೂಲ ಕಲ್ಪಿಸುತ್ತದೆ, ವಾರ್ಡಗಳಲ್ಲಿ ಸಿಸಿರಸ್ತೆ, ಚರಂಡಿ, ಕುಡಿಯುವ ನೀರು, ಉದ್ಯಾನವ, ಪಟ್ಟಣ ಸ್ವಾಗತ ಕಮಾನು ಅನುದಾನ ಟೆಂಡರ್ ಆಗಿದೆ, ಶೀಘ್ರವಾಗಿ ಕೆಲಸ ಆರಂಭವಾಗಲಿದೆ ಎಂದರು. ಪ.ಪಂ.ಸದಸ್ಯರು ತಮ್ಮ ವಾರ್ಡಗಳಲ್ಲಿನ ಕುಡಿಯುವ ನೀರು, ಬೀದಿ ದೀಪಾ, ರಸ್ತೆ, ಚರಂಡಿ ಕಾಮಗಾರಿಗಳು ಮಾಡಲು ಅನುದಾನವನ್ನು ಮಿಸಲಾಗಿಸಲು, ತ್ವರಿತ ಕಾಮಗಾರಿಗೆ, ಶೌಚಾಲಯ ನಿರ್ಮಾಣ ಕಾರ್ಯವನ್ನು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ.ಪಂ.ಸದಸ್ಯರಾದ ಕೃಷ್ಣನಾಯಕ, ಹಸೇನ ಅಲಿ, ಹಾಜೀ ಚೌದ್ರಿ, ಮೌಲಸಾಬ್ ವರ್ಚಸ್ಸ್, ಸೂರಿ ದುರುಗಣ್ಣ ನಾಯಕ, ಅಮರೇಶ ಗಡ್ಲ,
ಅಜೀತ ಹೊನ್ನಟಿಗಿ, ಬಸವರಾಜ ಬೆಣ್ಣೆ ಜೆ.ಬಸವರಾಜ ಪಾಟೀಲ್, ಗ್ಯಾನಪ್ಪ, ನಾಗರಾಜ, ಬಂದೇನವಾಜ, ಎಲ್ಲಾ ಸದಸ್ಯರು, ಜೆಇ ಹುಸೇನ್ , ಸಮೂದಾಯ ಸಂಘಟನಾಧಿಕಾರಿ ಹಂಪಯ್ಯ, ಸಿಬ್ಬಂದಿ ವರ್ಗ ಶರಣಬಸವ, ಲಕ್ಷ್ಮೀ, ವೀರೇಶ ಸೇರಿದಂತೆ ಅನೇಕರು ಇದ್ದರು.