ಪ.ಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ


ನರೇಗಲ್ಲ,ನ.10- ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಕ್ಕಮ್ಮ ಮಣ್ಣೋಡ್ಡರ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಕೋರಧಾನ್ಯಮಠ ಸೋಮವಾರ ಪದಗ್ರಹಣ ಮಾಡಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ರೋಣ ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಸ್ವಾಗತಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ. ಎಲ್ಲ ಸದಸ್ಯರು ಅಭಿವೃದ್ಧಿಯತ್ತ ಗಮನಹರಿಸಬೇಕು. ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಹಾಗೂ ಸಂಸದರು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದಲ್ಲಿ ಸ್ವಂತ ಮನೆರಹಿತ ಕಟುಂಬಗಳಿದ್ದು, ಅಂತಹ ಕುಟುಂಬಗಳಿಗೆ ನೆರವಾಗಬೇಕು ಎಂದರು.
ಪ.ಪಂ ನೂತನ ಅಧ್ಯಕ್ಷೆ ಅಕ್ಕಮ್ಮ ಮಣ್ಣೋಡ್ಡರ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಈರಪ್ಪ ಜೋಗಿ, ಮಲ್ಲಿಕಸಾಬ ರೋಣ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಫಕೀರಪ್ಪ ಮಳ್ಳಿ, ದಾವುದಲಿ ಕುದರಿ, ಫಕೀರಪ್ಪ ಬಿ, ಮುತ್ತಪ್ಪ ನೂಲ್ಕಿ, ರಾಚಯ್ಯ ಮಾಲಗಿತ್ತಿಮಠ, ಜ್ಯೋತಿ ಪಾಯಪ್ಪಗೌಡ್ರ, ವಿಜಯಲಕ್ಷ್ಮೀ ಚಲವಾದಿ, ವಿಶಾಲಾಕ್ಷಿ ಹೊಸಮನಿ, ಸುಮಿತ್ರಾ ಕಮಲಾಪುರ, ಮಂಜುಳಾ ಹುರಳಿ, ಬಿಜೆಪಿ ಮುಖಂಡರಾದ ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಮೌನೇಶ ಹೊಸಮನಿ, ಯಲ್ಲಪ್ಪ ಮಣ್ಣೋಡ್ಡರ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸೇರಿದಂತೆ ಇತರರಿದ್ದರು.