ಪ.ಪಂ. ಕಾರ್ಯಾಲಯ : ಶ್ರೀ ಕೃಷ್ಣ ಜನ್ಮಾ ದಿನಾಚರಣೆ

ಕವಿತಾಳ,ಸೆ.೦೭-
ಕವಿತಾಳ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಯಾದವ ಸಮಾಜದ ಮುಖಂಡರು ಹಾಗೂ ಮಹಿಳೆಯರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವಿ ಎಸ್ ರಂಗಸ್ವಾಮಿಯವರು ಸೇರಿದಂತೆ ಅನೇಕ ಮುಖಂಡರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯಾದವ ಸಮಾಜದ ಅನೇಕ ಮಹಿಳೆಯರು ಕಳಸ ಹಿಡಿದು ಭಾವಚಿತ್ರಕ್ಕೆ ಕಳಸ ಬೆಳಗಿದರು ಈ ಕಾರ್ಯಕ್ರಮದಲ್ಲಿ ಯಾದವ ಸಮಾಜದ ಮುಖಂಡರುಗಳಾದ ತಾಯಣ್ಣ ರಾಜು ರಮೇಶ್ ತಿಮ್ಮಣ್ಣ ಮುದುಕಪ್ಪ ಯಮನಪ್ಪ ಶ್ರೀಮತಿ ಲಕ್ಷ್ಮಿ ಪದ್ದಮ್ಮ ಬಸಮ್ಮ ಎಂಕಮ್ಮ ಹನುಮಂತ ಯಶೋದ ರಾಜ್ ಸೇರಿದಂತೆ ಊರಿನ ಗಣ್ಯರಾದ ಹುಚ್ಚಪ್ಪ ಉಡುವಟ್ಟಿ ಮೌನೇಶ್ ಹಿರೇ ಕುರುಬರು ಬೀರಪ್ಪ ಹಾಗೂ ಪಂಚಾಯಿತಿ ಬಂದಿಗಳಾದ ರಮೇಶ್ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.