ಪ.ಪಂಚಾಯತಿ ಕಟ್ಟಡ ವಿಕ್ಷಣೆ ಮಾಡಿದ ಶಾಸಕರು

ಸಿರವಾರ.ಜ೧೨- ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿಸುವ ಪಟ್ಟಣ ಪಂಚಾಯತಿ ನೂತನ ಕಟ್ಟಡ ಚೆನ್ನಾಗಿ ನಿರ್ಮಾಣವಾಗಿದೆ, ಇದೇ ತಿಂಗಳು ಉದ್ಘಾಟನೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಆಗಲಿ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಹೇಳಿದರು. ಪಟ್ಟಣ ಪಂಚಾಯತಿಯ ನೂತನ ಕಟ್ಟಡವನ್ನು ವಿಕ್ಷಣೆ ಮಾಡಿದ ಅವರು ನಂತರ ಸಂಜೆವಾಣಿ ಯೊಂದಿಗೆ ಮಾತನಾಡಿ ಗ್ರಾಮಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೆಲ್ದರ್ಜೆಗೆ ಏರಿದ ನಂತರ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದಿಲ, ನಾನು ಅನುದಾನ ನೀಡಿದೆನೆ, ಮುಂದಿನ ೩೦ ವರ್ಷದ ಪೂರ್ವಾಲೋಚನೆಯಂತೆ ಈಗ ಪಂಚಾಯತಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೊದಲನೆ ಮಹಡಿ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುವುದು. ಆವರದ ತುಂಬ ಸಸಿಗಳನ್ನು ಹಾಕಿ ಸಾರ್ವಜನಿಕರಿಗೆ ನೇರಳಿನ ವ್ಯವಸ್ಥೆಯಾಗುತ್ತದೆ. ಇದೇ ತಿಂಗಳು ( ಜ.೧೯) ಕ್ಕೆ ಪಂಚಾಯತಿ ಕಟ್ಟಡವನ್ನು ಉದ್ಘಾಟಿಸಿ ಸಾರ್ವಜನಿಕರಿಗೆ ಉಪಯೋಗವಾಗಲಿ, ಈಗಿರುವ ಕಟ್ಟಡ ಇಕ್ಕಟಾಗಿದೆ ಎಂದರು. ಜೆಡಿಎಸ್ ತಾಲೂಕ ಅದ್ಯಕ್ಷ ಮಲ್ಲಿಕಾರ್ಜುನ ಗೌಡ ಬಲ್ಲಟಗಿ, ಜಿ.ಲೋಕರೇಡ್ಡಿ,ರಾಜಾ ಆದರ್ಶನಾಯಕ, ಎ.ಎಂ.ಪಾಟೀಲ್, ದಾನಪ್ಪ, ಗ್ಯಾನಪ್ಪ,ಬಂದೇನವಾಜ್, ಪ.ಪಂ ಮುಖ್ಯಾದಿಕಾರಿ ತಿಮ್ಮಪ್ಪ ಜಗ್ಲಿ, ಜೆಇ ಎಸ್.ಎಂ.ಹಸನ್, ಶರಣಬಸವ ಪ.ಪಂಚಾಯತಿ ಸಿಬ್ಬಂದಿ ವರ್ಗದವರು ಇದ್ದರು.