ಪ.ಜಾತಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆನ್ ಲೈನ್  ಕೌನ್ಸಲಿಂಗ್ ಗೆ ಚಾಲನೆ

ಜಗಳೂರು.ಜು.೨೬; ಪಟ್ಟಣದ ಪ.ಜಾತಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳ ಆನ್ ಲೈನ್‌ ಪ್ರವೇಶಾತಿ ಕೌನ್ಸಿಲಿಂಗ್ ಗೆ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಬಿ.ಚಾಲನೆ ನೀಡಿದರು.ನಂತರ ಮಾತನಾಡಿದ ಅವರು,ಪಟ್ಟಣದ ವ್ಯಾಪ್ತಿಯ 3 ಪ.ಜಾತಿ  ಮೆಟ್ರಿಕ್ ನಂತರದ ವಸತಿನಿಲಯದಲ್ಲಿ ಲಿಂಗಣ್ಣನಹಳ್ಳಿ ರಸ್ತೆಯಲ್ಲಿನ ಹಳೇ ವಸತಿನಿಲಯಕ್ಕೆ  ಒಟ್ಟು 345 ವಿದ್ಯಾರ್ಥಿಗಳಿಗೆ ದಾಖಲಾತಿಗಾಗಿ ಮಂಜೂರಾಗಿದ್ದು. ಹೊಸ ಅರ್ಜಿಸಲ್ಲಿಸಲು  227 ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿನಿಯರ ಪಜಾತಿ ಮೆಟ್ರಿಕ್ ನಂತರದ ಹಳೇ ಹಾಸ್ಟೆಲ್ ಗೆ 150 ವಿದ್ಯಾರ್ಥಿನಿಯರಿಗೆ ಮಂಜೂರಾಗಿದ್ದು 80 ವಿದ್ಯಾರ್ಥಿನಿಯರಿಗೆ, ಹೊಸ ಹಾಸ್ಟೆಲ್ ನಲ್ಲಿ 100 ವಿದ್ಯಾರ್ಥಿಗಳಿಗೆ ಮಂಜೂರಾತಿ ದೊರೆತಿದ್ದು 80 ವಿದ್ಯಾರ್ಥಿಗಳ ಹೊಸ ಅರ್ಜಿಗೆ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದ್ದು.ಉಳಿದಂತೆ ನವೀಕರಣ ಮಾಡಲಾಗುವುದು.ಎಲ್ಲಾ ವರ್ಗದವರಿಗೂ ಮೀಸಲಾತಿಯಡಿ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.ಸುಸಜ್ಜಿತ ಕಟ್ಟಡ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ,ಸಮರ್ಪಕ ವಸತಿ ವ್ಯವಸ್ಥೆ,ಗುಣಮಟ್ಟದ ಆಹಾರ,ಶೌಚಾಲಯ,ಬೆಡ್ ಹಾಸಿಗೆ ವ್ಯವಸ್ಥೆ ,ಕಿಟ್ ಸೇರಿದಂತೆ ಸೌಲಭ್ಯ ಒದಗಿಸಲಾಗುವುದು.ಪೋಷಕರು ಆತಂಕಪಡದೆ ಸದುಪಯೋಗಪಡೆದುಕೊಳ್ಳಬೇಕು.ಇಂದು 65 ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನಡೆಸಲಾಗಿದೆ.ಉಳಿದಂತೆ ಪಜಾತಿ ಮೆಟ್ರಿಕ್ ಪೂರ್ವ ವಸತಿನಿಲಯ ಸೇರಿದಂತೆ ಹಂತಹಂತವಾಗಿ ನಿಗದಿತ ದಿನಾಂಕದೊಳಗೆ ಆನ್ ಲೈನ್ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು  ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕರಾದ ಮಹಾಬಲೇಶ್,ರುಬಿಯಾ,ದ್ವಿತಿಯ ದರ್ಜೆ ಸಹಾಯಕ ಉಮೇಶ್,ಸಿಬ್ಬಂದಿಗಳಾದ ,ರವಿ,ಅಲ್ಲಾಭಕ್ಷಿ, ಮಂಜುನಾಥ,ಸೌಜನ್ಯ,ಧನಂಜಯ್,ಸೇರಿದಂತೆ ಇದ್ದರು. 

Attachments area