ಪ್ಲೈವುಡ್ ಗೋದಾಮಿಗೆ ಬೆಂಕಿ

ಕೆ.ಆರ್.ಪುರ,ಸೆ.೧೬- ಪ್ಲೇನ್ ಶೇ ಪ್ಲೈವುಡ್ ಗೋದಾಮಿಗೆ ಬೆಂಕಿ ಬಿದ್ದಿರುವ ಘಟನೆ ಹೊರಮಾವು ಸಮೀಪದ ಬಂಜಾರ ಬಡಾವಣೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊರಮಾವು ಸಮೀಪದ ಬಂಜಾರ ಬಡಾವಣೆಯಲ್ಲಿ ರೀಶಿಧವನ್ ಅವರಿಗೆ ಸೇರಿದ ಗೋಡಾನ್ ಗೆ ಇಂದು ಬೆಳ್ಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ಲೈವುಡ್ ಬೆಂಕಿಗೆ ಆಹುತಿಯಾಗಿದೆ.
ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು,ಅಗ್ನಿ ಅನಾಹುತ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಇಂದು ಬೆಳ್ಳಿಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದ್ದು,ಹೆಣ್ಣೂರು ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗೋದಾಮಿಗೆ ಬೆಂಕಿ ಲಕ್ಷಾಂತರ ನಷ್ಟ
ಬೆಂಗಳೂರು,ಸೆ.೧೭-ಹೊರಮಾವು ಬಂಜಾರ ಲೇಔಟ್ ಮುಖ್ಯರಸ್ತೆಯ ಎಲೆಕ್ಟ್ರಿಕ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗೋದಾಮಿನಲ್ಲಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಂಜಾರ ಲೇಔಟ್ ಮುಖ್ಯರಸ್ತೆಯ ಬ್ಯಾಡ್ಮಿಂಟನ್ ಸ್ಟೇಡಿಯಂ ಬಳಿ ಇರುವ ಎಲೆಕ್ಟ್ರಿಕ್ ಗೋದಾಮಿಗೆ ಬೆಂಕಿ ಬಿದ್ದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ೪ ಅಗ್ನಿಶಾಮಕ ದಳದ ವಾಹನಗಳು ಧಾವಿಸಿ ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಬೆಂಕಿಯಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದ್ದು,ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಂಡಿದ್ದಾರೆ.