ಪ್ಲೂಯೆಂಜಾ-ಎ ಸೋಂಕು ಕುರಿತು ಜಾಗೃತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು:ಜ:13: ತಾಲೂಕಿನ ವಡ್ಡು ಗ್ರಾಮದ ಒಂದನೇ ವಾರ್ಡ್ ನಲ್ಲಿ ಗುಂಪು ಸಭೆಯ ಮೂಲಕ ಇನ್ ಫ್ಲೂಯೆಂಜಾ-ಎ ಸೋಂಕು ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಸೋಂಕು ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇನ್ ಫ್ಲೂಯೆಂಜಾ ಸೋಂಕು ಸಹ ಕೋವಿಡ್ ನಂತಹ ಲಕ್ಷಣಗಳನ್ನು ಹೊಂದಿದಿದೆ, ಹೆಚ್1 ಎನ್1 ವೈರಸ್ ನಿಂದ ಹರಡುವ ಕಾಯಿಲೆಯಾಗಿದೆ, ನೆಗಡಿ, ಕೆಮ್ಮು,ಜ್ವರ,ಚಳಿ, ಉಸಿರಾಟಾದ ತೊಂದರೆ, ಕೆಲವೊಮ್ಮೆ ವಾಂತಿ ಭೇದಿ ಸಹ ಆಗಬಹುದು, ಲಕ್ಷಣಗಳು ಆದರಿಸಿ ವೈದ್ಯರು ಚಿಕಿತ್ಸೆ ನೀಡುವರು, ಮುನ್ನೆಚ್ಚರಿಕೆ ಕ್ರಮಗಳಾದ ಕೆಮ್ಮುವಾಗ ಸೀನುವಾಗ ಕರವಸ್ತ್ರ ಉಪಯೋಗಿಸುವುದು,ಲಕ್ಷಣಗಳು ಇದ್ದಲ್ಲಿ ಮಾಸ್ಕ್ ಧರಿಸುವುದು, ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುವುದು, ಪ್ರತ್ಯೇಕ ವಿಶ್ರಾಂತಿ ಪಡೆಯುವುದು, ಪೌಷ್ಟಿಕಾಹಾರ ಸೇವಿಸುವುದು, ಉಸಿರಾಟದತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಮಾಡುವುದು ಮಾಡಿದಲ್ಲಿ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಬಹುದು,
 ಸೋಂಕಿನ ಲಕ್ಷಣಗಳು ಇದ್ದ ವ್ಯಕ್ತಿ ಇದ್ದಲ್ಲಿ ಅತೀ ಸಮೀಪ ಹೋಗುವುದಾಗಲಿ, ಕೈ ಕುಲುಕುವುದಾಗಲಿ, ಮೂಗು, ಬಾಯಿ, ಕಣ್ಣುಗಳ ಮುಟ್ಟ ಬಾರದು, ಲಕ್ಷಣಗಳು ಇದ್ದ ವ್ಯಕ್ತಿಯು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯ ಬೇಕು ವಿನಃ ಸ್ವಯಂ ಚಿಕಿತ್ಸೆ ಪಡೆಯ ಬಾರದು ಎಂದು ತಿಳಿಸಿದರು,
 ಈ ಸಂದರ್ಭದಲ್ಲಿ ಗ್ರಾಮದ ನಾಗರೀಕರಾದ ಷಣ್ಮುಖಪ್ಪ, ವೀರೇಶ, ಶಿಲ್ಪಾ, ಶಕುಂತಲಾ, ಕವಿತಾ, ಚೈತ್ರ, ಗೌಸಿಯಾ, ಮಲ್ಲಮ್ಮ,ಶೈಲಜಾ, ಅಶ್ವಿನಿ,ಸುಪ್ರಿಯಾ, ಸುಮಲತಾ, ಕಾವ್ಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಭಾರತಿ ಇತರರು ಉಪಸ್ಥಿತರಿದ್ದರು.