ಪ್ಲಾಸ್ಮಾ ಅಭಾವ: ಯುವಕರಲ್ಲಿ ರಕ್ತದಾನಕ್ಕೆ ಲೋಹಿತ್ ಮನವಿ

ಮೈಸೂರು:ಏ:24: ಕೊರೋನಾ ಎರಡನೇ ಅಲೆಯ ಪರಿಣಾಮ ರಾಜ್ಯಾದ್ಯಂತ ಇನ್ನೂ 2 ರಿಂದ 3 ತಿಂಗಳು ಪ್ಲಾಸ್ಮಾ ರಕ್ತದ ಅಭಾವ ಹೆಚ್ಚಾಗುವ ಸಂಭವವಿದೆ ಎಂದು ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಪ್ಲಾಸ್ಮಾ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ಸ್ಥಳೀಯ ಯುವಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ (18 ರಿಂದ 45 ವರ್ಷದ ಒಳಪಟ್ಟವರು) ಮೇ 1 ಒಳಗಾಗಿ ರಕ್ತದಾನ ಮಾಡಿದರೆ ಬಹಳ ಒಳ್ಳೆಯದು ಏಕೆಂದರೆ ವ್ಯಾಕ್ಸಿನೇಷನ್ ತೆಗೆದುಕೊಂಡ ನಂತರ ಕನಿಷ್ಠ ಮೂವತ್ತು ದಿವಸ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ ರಾಜ್ಯಾದ್ಯಂತ ರಕ್ತದ ಅಭಾವ ಹೆಚ್ಚಾಗುತ್ತದೆ, ಆದ್ದರಿಂದ ಮುಂಚಿತವಾಗಿ ರಕ್ತದಾನ ಮಾಡಬೇಕೆಂದು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ ಅನೇಕ ಜೀವಗಳು ಉಳಿಯುತ್ತವೆ ಎಂದರು.
ಕೊರೋನಾ ವೈರಸ್ ದಾಳಿಯ ಪರಿಣಾಮ ನಗರದಲ್ಲೀಗ ರಕ್ತ ಸಂಗ್ರಹ ಕೇಂದ್ರಗಳಲ್ಲಿ ಪ್ಲಾಸ್ಮಾ ರಕ್ತ ಕೊರತೆ ಉಂಟಾಗಿದ್ದು ರೋಗಿಗಳು ಪರದಾಡುವಂತಾಗಿದೆ. ಕರೋನ ವೈರಸ್ ಭೀತಿಯಿಂದ ನಗರದಲ್ಲಿರುವ ಯಾರೂ ರಕ್ತದಾನ ಮಾಡಲು ಮನೆಯಿಂದ ಹೊರಗೆ ಬರುತ್ತಿಲ್ಲ ಕೊರೋನಾ ಸೋಂಕಿತರು ಗುಣಮುಖರಾದ ನಂತರ ಅವರ ಪ್ಲಾಸ್ಮವನ್ನು ಅವಶ್ಯಕವಾದ ರೋಗಿಗಳಿಗೆ ತುರ್ತಾಗಿ ಕೊಡಬೇಕಾಗಿದ್ದ ಪರಿಸ್ಥಿತಿಯಲ್ಲಿ ಯಾರೂ ಕೂಡ ಪ್ಲಾಸ್ಮಾ ಕೊಡಲು ಮುಂದೆ ಬರುತ್ತಿಲ್ಲ ಇದರಿಂದ ನಗರದ ರಕ್ತ ಸಂಗ್ರಹ ಕೇಂದ್ರಗಳಿಗೆ ಪ್ಲಾಸ್ಮಾ ರಕ್ತ ದೊರೆಯುತ್ತಿಲ್ಲ.
ಬೆಂಗಳೂರು ಮಂಗಳೂರು ಮಡಿಕೇರಿಯಿಂದ ಇನ್ನಿತರ ಜಿಲ್ಲೆಗಳಿಂದ ಕರೋನ ಸೋಂಕಿನಿಂದ ಗುಣಮುಖವಾದ ವ್ಯಕ್ತಿಯನ್ನು ಹುಡುಕಿ ಪ್ಲಾಸ್ಮಾವನ್ನು ಪಡೆಯಲು ಹರಸಾಹಸ ಪಡುವಂತಾಗಿದೆ. ಇನ್ನು ರಾಜ್ಯದಲ್ಲಿ ಸಾಕಷ್ಟು ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಇಲ್ಲದೆ ಪ್ರತಿದಿನ ಗರ್ಭಿಣಿಯರು, ಅಪಘಾತವಾದ ವ್ಯಕ್ತಿಗಳು,ಡಯಾಲಿಸಿಸ್ ರೋಗಿಗಳು, ಪ್ರಾಣ ಬಿಡುತ್ತಿದ್ದಾರೆ. ಇದನ್ನರಿತು ಇಂದೇ ಎಚ್ಚೆತ್ತುಕೊಂಡು ಪ್ಲಾಸ್ಮಾ ರಕ್ತದಾನ ಮಾಡುವ ಮುಖಾಂತರ, ಅನೇಕರ ಜೀವವನ್ನು ಉಳಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.