ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ತಪ್ಪು ಕಲ್ಪನೆ ಬೇಡ: ಡಾ.ಅಂಬರೀಶ

ಕಲಬುರಗಿ, ಜು 17: ಪ್ಲಾಸ್ಟಿಕ್ ಸರ್ಜರಿ ಎಂದರೆ ಸೌಂದರ್ಯವರ್ಧಕ ಸರ್ಜರಿ ದುಬಾರಿಸರ್ಜರಿ ಎನ್ನುವ ಮನೋಭಾವ ಜನರಲ್ಲಿದೆ ಅದು ತೋಲಗಬೇಕು ಎಂದು ಪ್ಲಾಸ್ಟಿಕ್ ಸರ್ಜನ್ ಡಾ. ಅಂಬರೀಶ ಬಿರಾದಾರ ಹೇಳಿದರು.ನಗರದ ಕನ್ನಡಭವನದಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಸರ್ಜರಿ ಸೌಂದರ್ಯವರ್ದಕ ಎಂದರೆ ತಪ್ಪಿಲ್ಲ.ಆದರೆ ಅಪಘಾತದಲ್ಲಿ ಅಥವಾ ಯಾವುದೋ ಸಂದರ್ಭ ಕೈ ಕಾಲು ಇನ್ನಿತರಕಡೆ ದೊಡ್ಡ ಗಾಯ ಆಗಲಿ ಕೈಕಾಲು ಮುರಿದಿರಲಿ ಮುಖಕ್ಕೆ ಎನಾದರೂ ಆದರೆ ಸ್ವಲ್ಪ ಗಾಯ ಇದ್ದರೆ ಸಮಸ್ಯೆ ಇಲ್ಲ. ಹೆಚ್ಚಿನ ಪ್ರಮಾಣ ಇದ್ದರೆ ಪ್ಲಾಸ್ಟಿಕ್ ಸರ್ಜರಿ ಅವಶ್ಯವಾಗಿ ಮಾಡಿಸಿಕೋಂಡು ಮೊದಲಿನಂತೆ ಕಾಣಬಹುದು. ಆದ್ದರಿಂದ ಪ್ಲಾಸ್ಟಿಕ್ ಸರ್ಜರಿ ಕುರಿತು ಜನಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು. ಶ್ರೀನಿವಾಸ ಸರಡಗಿಯ ವೀರಭದ್ರ ಶಿವಾಚಾರ್ಯರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿಡಾ ಶರಣು ಗುಬ್ಬಿ, ಡಾ.ಬಸವೇಶ್ ವೈಜನಾಥ ಪಾಟೀಲ, ಎಂ ಎಸ್ ಪಾಟೀಲ ನರಿಬೋಳ, ಪರಶುರಾಮ ಆಗಮಿಸಿದರು.ಶರಣು ಅವಂತಗಿ ಸ್ವಾಗತಿಸಿದರು .ಮನೋಜ ಪಾಟೀಲನಿರೂಪಿಸಿದರು.ಸಿದ್ದಾರೂಢ,ಮಲ್ಲಿಕಾರ್ಜುನ,ಭಾಗ್ಯ ಇನ್ನಿತರರಿದ್ದರು