ಪ್ಲಾಸ್ಟಿಕ್, ರಾಸಾಯನಿಕ ವಸ್ತು ಮುಕ್ತ ದೇವಾಲಯಕ್ಕೆ ಮನವಿ

ಮೈಸೂರು:ಮಾ:26: ಪ್ಲಾಸ್ಟಿಕ್ ಮುಕ್ತ ದೇವಸ್ಥಾನ ಮತ್ತು ರಾಸಾಯನಿಕ ಮುಕ್ತ ಅರಿಶಿನ ಕುಂಕುಮ ಬಳಕೆ ಧಾರ್ಮಿಕ ಕೇಂದ್ರಗಳಲ್ಲಿ ಜಾರಿಗೆ ಬರಲಿ ಎಂದು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ್ ಪೂಜಾರಿಗೆ ಮನವಿ ಪತ್ರ ಸಲ್ಲಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಸಚಿವರಾದ ಕೋಟೆ ಶ್ರೀನಿವಾಸ ಪೂಜಾರಿ ರವರನ್ನು ಕೆಎಂಪಿಕೆ ಟ್ರಸ್ಟ್ ಪದಾಧಿಕಾರಿಗಳು ಭೇಟಿ ಮಾಡಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಮತ್ತು ರಾಸಾಯನಿಕ ಮುಕ್ತ ಅರಿಶಿನ ಕುಂಕುಮ ಬಳಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಕರ್ನಾಟಕದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಳಿಂದ ತೀರ್ಥಪ್ರಸಾದ ವಿನಿಯೋಗದ ವರೆಗೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿ ನಾಶಕ್ಕೆ ಕಾರಣವಾಗಲಿದ್ದು, ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ವಲಯವೆಂದು ನಾಮಫಲಕವಿದ್ದರೂ ಸಹ ಸಂಪೂರ್ಣ ಅನುಷ್ಠಾನವಾಗಿಲ್ಲ ಇದರ ಬಗ್ಗೆ ಮುಜರಾಯಿ ಇಲಾಖೆ ಸರ್ಕಾರದ ನಿಯಮಾನುಸಾರ ಪಾಲಿಸುವಂತೆ ದೇವಸ್ಥಾನಗಳಿಗೆ ಧಾರ್ಮಿಕ ಕೇಂದ್ರಗಳಿಗೆ ಅಧಿಕಾರಿಗಳು ನಿಯಮಗಳನ್ನು ನಿರ್ದೇಶಿಸುವಂತೆ ತಾವು ಸೂಚಿಸಬೇಕಿದೆ ಮತ್ತು ಕರ್ನಾಟಕದ ಸಣ್ಣಪುಟ್ಟ ದೇವಸ್ಥಾನಗಳಿಂದ ಮಠಮಂದಿರ ಧಾರ್ಮಿಕ ಕೇಂದ್ರಗಳವರೆಗೂ ಪೂಜಾ ಕೈಂಕರ್ಯ ಸಲ್ಲಿಸಲು ಹೂವು ಹಣ್ಣುಗಳೊಂದಿಗೆ ಅರಿಶಿನ ಕುಂಕುಮವನ್ನು ಭಕ್ತಸಮೂಹ ಸಮರ್ಪಿಸುತ್ತಾರೆ ಆದರೆ ಇತ್ತಿಚೆಗೆ ಕಂಡು ಬರುವ ಸಂಗತಿ ಎಂದರೆ ಬಹುತೇಖ ಮಾರುಕಟ್ಟೆಯಲ್ಲಿ ಅಂಗಡಿಮುಂಗಟ್ಟುಗಳಲ್ಲಿ ದೇವಸ್ಥಾನದ ಸುತ್ತಮುತ್ತಲು ಮಾರುವ ಅರಿಶಿನ ಕುಂಕುಮ ಕಲಬೆರೆಕೆಯಾಗಿದ್ದು ರಾಸಾಯನಿಕ ಬಣ್ಣ ಮಿಶ್ರಣವಾಗಿರುತ್ತದೆ ಇದರ ಬಗ್ಗೆ ಯಾವ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದರು.
ಪಾರಂಪರಿಕ ಅರಿಶಿನ ಕುಂಕುಮ ಪದಾರ್ಥ ವಿಧಾನ ಹೊರೆತುಪಡಿಸಿ ರಾಸಾಯನಿಕ ಮಿಶ್ರಣದಿಂದ ದೇವರ ವಿಗ್ರಹಕ್ಕೆ ಮೂರ್ತಿಗೆ ಮತ್ತು ಲೋಹ ಪದಾರ್ಥಗಳಿಗಷ್ಟೆ ಅಲ್ಲದೇ ವ್ಯಾಪಾರ ಮಾಡುವವನಿಂದ ಸೇರಿದಂತೆ ಭಕ್ತಾಧಿಯ ಕುಟುಂಬಕ್ಕೆ ಮತ್ತು ಅರ್ಚಕರಿಗೆ ದೇವಸ್ಥಾನದ ಸಿಬ್ಬಂದಿಯ ವರ್ಗದ ವರೆಗೂ ರಾಸಾಯನಿಕ ಮಿಶ್ರಣದಿಂದ ಉಸಿರಾಟದ ತೊಂದರೆ ಚರ್ಮ ಕಾಯಿಲೆ ಸಮಸ್ಯೆ ಉಲ್ಭಣಿಸಿ ಆರೋಗ್ಯ ಕ್ಷೀಣಿಸುತ್ತದೆ, ಇದರ ಕಡೆ ಮುಜರಾಯಿ ಅಧಿಕಾರಿಗಳು ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಮತ್ತು ದೇವಸ್ಥಾನಗಳು ಮಠಮಂದಿರ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನ ಬರವಂತೆ ಸುತ್ತೋಲೆ ಹೊರಡಿಸಬೇಕೆಂದು ಮನವಿ ಮಡಿದರು,
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಯುವ ಮುಖಂಡ ಮುಳ್ಳೂರು ಗುರುಪ್ರಸಾದ್, ಜೀವಧಾರ ಗಿರೀಶ್, ಅಪೂರ್ವ ಸುರೇಶ್, ಅಶ್ವಿನ್, ನಗರಪಾಲಿಕೆ ನಾಮನಿರ್ದೇಶನ ಸದಸ್ಯರಾದ ಕೆಜೆ.ರಮೇಶ್, ಮಾಜಿ ನಗರಪಾಲಿಕೆ ಸದಸ್ಯರಾದ ಜಯರಾಂ, ಲೋಹಿತ್ ಅರಸ್, ಜಗದೀಶ್, ಗೋವಿಂದ ಭಟ್, ಸುಚೀಂದ್ರ ಇನ್ನಿತರರು ಇದ್ದರು.