ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪಣ

ಚಿಕ್ಕಬಳ್ಳಾಪುರ.ಜೂ೨:ಚಿಕ್ಕಬಳ್ಳಾಪುರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪಣ ತೊಡಲಾಗಿದೆ. ಕಾನೂನು ಮೀರಿ ಯಾರೇ ನಡೆದುಕೊಂಡರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ತಾಲೂಕು ಕಚೇರಿಯಲ್ಲಿ ನೂತನ ಶಾಸಕರ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪ್ರತಿದಿನ ಬೆಳಗ್ಗೆ ೬ರಿಂದ ೯ ಗಂಟೆಯವರೆಗೆ ನಮಸ್ತೆ ಚಿಕ್ಕಾಬಳ್ಳಾಪುರ ಕಾರ್ಯಕ್ರಮ ಮಾಡುತ್ತಿದ್ದೇನೆ. ಇನ್ನೂ ಜನರಿಗೆ ಹತ್ತಿರವಾಗುವ ಸಲುವಾಗಿ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಶಾಸಕರ ಕಚೇರಿಯಲ್ಲಿ ಸಹ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ರೈತ ನಾಯಕ ದಿವಂಗತ ಕೆ.ಬಿ. ಪಿಳ್ಳಪ್ಪ ರವರ ಪ್ರತಿಮೆಯನ್ನು ನೂತನವಾಗಿ ನಿರ್ಮಾಣ ಮಾಡಿರುವ ಪಿಎಲ್‌ಡಿ ಬ್ಯಾಂಕ್ ಭವನದಲ್ಲಿ ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಈ ಹಿಂದೆ ನಾ ಶಾಸಕರು ಪ್ರತಿಮೆ ಸ್ಥಾಪನೆಗೆ ಅಡ್ಡಗಾಲ ಆಗಿದ್ದರು ಆದರೆ ನಾನು ಅಭಿವೃದ್ಧಿಪರ ಕೆಲಸ ಮಾಡುವವನಾಗಿದ್ದೇನೆ ಎಂದರು ಅದೇ ರೀತಿ ಚಿಕ್ಕಬಳ್ಳಾಪುರದ ಮಾಜಿ ಶಾಸಕರುಗಳಾದ ಎಸ್‌ಎಂ ಮುನಿಯಪ್ಪ ಎಂ ಶಿವಾನಂದ ಮುಂತಾದ ಅವರನ್ನು ಸ್ಮರಿಸಿದರು.
ನಗರ ಸಭೆಯಲ್ಲಿ ಈ ಖಾತೆ ವಿಚಾರದಲ್ಲಿ ಲಂಚ ಪಡೆಯುತ್ತಿರುವುದು ಸಾರ್ವಜನಿಕವಾಗಿ ಗಮನಕ್ಕೆ ಬಂದಿರುವುದು ಹಾಗೂ ನಮ್ಮ ತಂಡದವರೇ ನಗರಸಭೆಯಲ್ಲಿ ಸ್ಪ್ರಿಂಗ್ ಆಪರೇಷನ್ ಮಾಡಿದ್ದಾರೆ ತಪ್ಪಿತಸ್ಥರಿಗೆ ಶಿಕ್ಷಕಚಿತ ಹಾಗೂ ಇನ್ನು ಮುಂದೆ ಈ ಖಾತೆಗಳನ್ನು ಸಾರ್ವಜನಿಕರು ಮಾಡಿಸಿಕೊಳ್ಳಲು ನಗರ ಸಭೆಗೆ ಅಲೆದಾಡ ಬೇಕಾಗಿಲ್ಲ ಅರ್ಜಿ ಮತ್ತು ಸೂಕ್ತ ದಾಖಲೆಗಳನ್ನು ಕೊಟ್ಟರೆ ನಗರಸಭೆ ಈ ಖಾತೆಗಳನ್ನು ಮಾಡಿಸಿ ನಾನೇ ಮಾಲೀಕರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಪತ್ರಕರ್ತರಿಗೂ ಸಹ ಒಳ ಪ್ರವೇಶ ಸಿಗದೆ ಕೆಲವಾರು ಮಂದಿ ಹೊರಗೆ ನಿಂತು ಒಳ ಹೋಗದ ಅಸಹಾಯಕತೆಯನ್ನು ಪ್ರದರ್ಶಿಸಿದರು.