ಪ್ಲಾಸ್ಟಿಕ್ ಮುಕ್ತ ಕುರುಗೋಡು ಪಟ್ಟಣಕ್ಕೆ ಸಹಕರಿಸಿ- ಪರಶುರಾಮ


ಸಂಜೆವಾಣಿ ವಾರ್ತೆ
ಕುರುಗೋಡು.ಜು.23:  ಪ್ಲಾಸ್ಟಿಕ್ ಮುಕ್ತ ಕುರುಗೋಡು ಪಟ್ಟಣಕ್ಕೆ  ಅಂಗಡಿ-ಮುಂಗಟ್ಟುಗಳ ಮಾಲಿಕರು, ಗ್ರಾಹಕರು, ಮತ್ತು ಊರಿನ ಮುಖಂಡರು ಸಹಕಾರ ನೀಡಬೇಕೆಂದು ಕುರುಗೋಡು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಗರಿಕರಲ್ಲಿ ಮನವಿ ಮಾಡಿದರು.
ಅವರು ಪಟ್ಟಣದ ವಿವಿದ ಅಂಗಡಿ-ಮುಂಗಟ್ಟುಗಳ ಮೇಲೆ ಪುರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿತಂಡ ದಾಳಿನಡೆಸಿ, ಅವರಲ್ಲಿನ 75 ಕೆಜಿ ಪ್ಲಾಸ್ಟಿಕ್ ವಸ್ತುಗಳು  ಹಾಗು ರೂ. 5500 ಗಳನ್ನು ವಶಪಡಿಸಿಕೊಂಡ ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್ ವಸ್ತುಗಳು ನೀರಿನಲ್ಲಿ ಕರುಗುವುದಿಲ್ಲ, ಜೊತೆಗೆ ಮಣ್ಣಿನಲ್ಲಿಯೂ ವಿಲೀನವಾಗುವುದಿಲ್ಲ. ಆದ್ದರಿಂದ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಷೇದಿಸಿದೆ. ಆದರೆ ಜನರು ಮಾತ್ರ ಪ್ಲಾಸ್ಟಿಕ್ ವಸ್ತುಗಳ ಬಳಕೆ ಬಿಟ್ಟಿಲ್ಲ ಎಂದು ವಿಷಾದವ್ಯಕ್ತಪಡಿಸಿದರು.  ಆದ್ದರಿಂದ ಪ್ರತಿಯೊಬ್ಬ ಅಂಗಡಿ-ಮುಂಗಟ್ಟುಗಳ ಮಾಲಿಕರು, ಮತ್ತು ನಾಗರಿಕರು ಸಹಕರಿಸಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ದಾಳಿಯಲ್ಲಿ ಕುರುಗೋಡು ಪುರಸಭೆಯ ರಾಜೇಶ, ಕೆವಿ.ಶಾರದ, ಶಷಿದರ, ಕುಮಾರ್ ಹಾಗು ಸಿಬ್ಬಂದಿತಂಡದವರು ಇದ್ದರು.
ಪ್ರಾರಂಭದಲ್ಲಿ ಗೆಣಿಕೆಹಾಳುರಸ್ತೆ, ಬಳ್ಳಾರಿರಸ್ತೆ, ಕಂಪ್ಲಿರಸ್ತೆ, ಬಾದನಹಟ್ಟಿರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟುಗಳಲ್ಲಿನ ಪ್ಲಾಸ್ಟಿಕ್‍ಗ್ಲಾಸ್, ಪ್ಲೇಟ್, ಪ್ಲಾಸ್ಟಿಕ್‍ಕವರ್, ಕಪ್ ಸೇರಿದಂತೆ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಪ್ಲಾಸ್ಟಿಕ್ ವಸ್ತುಗಳಿಂದಾಗುವ ಅನಾಹುತವನ್ನು ಜನತೆಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿದರು.