ಪ್ಲಾಸ್ಟಿಕ್ ಮುಕ್ತ ಅಭಿಯಾನ

ಹುಬ್ಬಳ್ಳಿ,ಫೆ18: ನಿಷೇಧಿತ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಮತ್ತೊಮ್ಮೆ ಹಮ್ಮಿಕೊಳ್ಳಲಾಗಿದ್ದು, ಕನ್ನಡ ನಾಮಫಲಕಗಳ ಕುರಿತು ಹೋರಾಟಕ್ಕೆ ಏಳು ದಿನಗಳ ಕಾಲ ಗಡುವು ನೀಡಲಾಗಿದ್ದು, ತೆರವು ಮಾಡದಿದ್ದರೆ ಮತ್ತೇ ನಾವು ಕಾರ್ಯಾಚರಣೆಗೆ ಇಳಿಯಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾಧ್ಯಕ್ಷರಾದ ಮಂಜುನಾಥ ಲೂತಿಮಠ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷೇಧಿತ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ. ಕೇಸ್ ಬೇಕಾದರೂ ಮಾಡಲಿ ನಾವು ಕಾರ್ಯಾಚರಣೆಗೆ ಸಿದ್ದ ಎಂದು ಅವರು ಹೇಳಿದರು.
ಮಹಾಪೌರರು, ಸಂಬಂಧಪಟ್ಟ ಅಧಿಕಾರಿಗಳು, ಪೆÇಲೀಸ್ ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಹಿಂದೆ 20 ಸಾವಿರ ಟನ್ ನಿಷೇಧಿತ ಪ್ಲಾಸ್ಟಿಕ್ ಗೆ 40 ಸಾವಿರ ದಂಡ ಹಾಕಿದ್ದಾರೆ. ಯಾವ ಮಾನದಂಡದ ಆಧಾರದ ಮೇರೆಗೆ ದಂಡ ಹಾಕಿದ್ದಾರೆ. ದಂಡದ ಮೊತ್ತ ಹೆಚ್ಚಾಗುತ್ತದೆ ಈ ವಿಚಾರವಾಗಿ ಪಾಲಿಕೆ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.