ಪ್ಲಾಸ್ಟಿಕ್ ಮುಕ್ತವಾದರೆ ಆರೋಗ್ಯ ಗುಣಮಟ್ಟ ಹೆಚ್ಚಳ

ಕೋಲಾರ,ಜ.೫:ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಕಾರ್ಯಕ್ರಮ ಅಡಿಯಲ್ಲಿ ೧೫ನೇ ವಾರ್ಡಿನ ಹಾರೋಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಸಂಗೀತ ಅವರು ಚಾಲನೆ ನೀಡಿದರು. ನಂತರ ರಸ್ತೆಯಲ್ಲಿ ಇದ್ದಂತಹ ಪ್ಲಾಸ್ಟಿಕ್ ತ್ಯಾಜ್ಯ ಖಾಲಿ ಚೀಲಕ್ಕೆ ತುಂಬಿಸಿದ ಅವರು ಪ್ಲಾಸ್ಟಿಕ್ ಮುಕ್ತವಾದರೆ ಆರೋಗ್ಯ ಗುಣಮಟ್ಟ ಹೆಚ್ಚುತ್ತದೆ ಎಂದರು.
ಅಲ್ಲದೆ ಹಾರೋಹಳ್ಳಿ ಭಾಗದಲ್ಲಿ ಒಳ್ಳೆಯ ಕಾರ್ಯಕ್ರಮ ಏರ್ಪಡಿಸಿದ್ದು, ಈ ಯೋಜನೆಯ ಮೂಲಕ ಕೋಲಾರ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವುದರೊಂದಿಗೆ, ಈಕೋ ಬ್ರಿಕ್ಸ್ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ ಎಂದರು. ಇನ್ನು ಇಕೋ ಬ್ರಿಕ್ಸ್ ನಲ್ಲಿ ಮನೆಯ ಗೋಡೆಗಳನ್ನು ನಿರ್ಮಿಸಿರುವುದು, ಹಾಗೂ ತೊಟ್ಟಿಗಳನ್ನು ನಿರ್ಮಿಸಿರುವುದು, ಮನೆಯಂಗಳದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದಾಗಿ, ಕೋಲಾರದಲ್ಲಿ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅಂತ್ಯವಾಗುತ್ತದೆ ಎಂದು ತಿಳಿಸಿದರು.
ಇನ್ನು ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರಿಸಿದರೆ ಕೋಲಾರವನ್ನ ತ್ಯಾಜ್ಯಮುಕ್ತ ನಗರವನ್ನಾಗಿ ಮಾಡಬಹುದು ಎಂದರು.
ಇನ್ನು ಮಹಿಳಾ ಸಮೂಹದ ಶಾಂತಮ್ಮ ಮಾತನಾಡಿ, ೧೫ನೇ ವಾರ್ಡಿನ ಯುವಪಡೆ ಸಿದ್ಧವಾಗಿದ್ದು, ಯುವಕರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದೆಂದು ಈ ದಿನ ನಡೆದಂತಹ ಕಾರ್ಯಕ್ರಮವೇ ಉದಾಹರಣೆಯಾಗಿ ನೋಡಬಹುದು ಎಂದರು. ಮುಂದಿನ ದಿನಗಳಲ್ಲಿ ಸತತವಾಗಿ ಪ್ರತಿ ಮನೆ ಮನೆಗೂ ಭೇಟಿ ಮಾಡಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಈಕೋ ಬ್ರಿಕ್ಸ್ ಮಾಡುವುದನ್ನು ತೋರಿಸಿ ಕೊಡುತ್ತೇವೆ. ಈ ರೀತಿಯಾಗಿ ಮಾಡಿಕೊಂಡು ಕೊಟ್ಟವರಿಗೆ ಪರಿಸರ ದಿನಾಚರಣೆಯಂದು ಬಹುಮಾನಗಳನ್ನು ಕೊಡುತ್ತೇವೆ ಎಂದರು.
ಕೆ.ಎನ್ ತ್ಯಾಗರಾಜ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡದೆ ತಡೆಯುವುದು ನಮ್ಮೆಲ್ಲರ ಜ್ಞಾನ ಆಗಬೇಕಾಗಿದೆ. ಪ್ಲಾಸ್ಟಿಕ್‌ನಿಂದ ಹಲವು ರೋಗಗಳಿಗೆ ತುತ್ತಾಗದೆ, ಪ್ಲಾಸ್ಟಿಕ್ ಕಸವನ್ನು ಸುಡದೆ ಇರುವ ಹಾಗೆ ಮಾಡಿ, ಆರೋಗ್ಯವನ್ನು ಸ್ವಚ್ಛತೆಯಿಂದ ಮನುಷ್ಯರು ಬದುಕಬೇಕೆಂದು ಹೇಳಿದರು.
ಸಂಚಾಲಕ ಮಹೇಶ್ ರಾವ್ ಕದಂ ಮಾತನಾಡಿ, ಐದು ವರ್ಷಗಳ ಕಾಲ ನಿರಂತರವಾಗಿ ನಡೆಯುವಂತಹ ಈ ಅಭಿಯಾನವನ್ನು ಕೋಲಾರ ನಗರ ಜನತೆ ಮನಸ್ಸು ಮಾಡಿ ಸಹಕಾರ ಕೊಟ್ಟಲ್ಲಿ ಪ್ಲಾಸ್ಟಿಕ್ ನ್ನ ತಡೆಯಬಹುದು ಮತ್ತು ಪ್ಲಾಸ್ಟಿಕ್ ಬಳಕೆ ಮಾಡುವಂತಹ ಎಲ್ಲಾ ವಸ್ತುಗಳನ್ನು ನಿಷೇಧಿಸಬಹುದು ಎಂದು ತಿಳಿಸಿದರು.
ಸಂಚಾಲಕ ಬಿ.ಶಿವಕುಮಾರ್ ಮಾತನಾಡಿ, ಕಾರ್ಯಕ್ರಮದ ನಂತರ ದಿನಗಳಲ್ಲಿ ಬಹುತೇಕ ಕಾರ್ಯಕ್ರಮಗಳು ೧೫ನೇ ವಾರ್ಡ್‌ನಲ್ಲಿ ಹಮ್ಮಿಕೊಳ್ಳುತ್ತೇವೆ. ಈಗಾಗಲೇ ಯುವಕರನ್ನು ಜಾಗೃತಗೊಳಿಸಿ ಪ್ಲಾಸ್ಟಿಕ್ ಮುಕ್ತ ಮಾಡುವ ಗುರಿಗೆ ವಿಷಯಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಿಸರ್ಗ ಯುವ ಸ್ನೇಹಿ ಬಳಗದ ವೇಣು, ಕೇಶವ, ರಂಜಿತ್, ವೆಂಕಟೇಶ್, ದರ್ಶನ್, ಅಜಯ್, ಶ್ರಾವಣಿ, ಅಕ್ಷಯ, ಸವಿತಾ, ವಂದನ, ಗಮನ ಮಹಿಳೆಯ ಸಮೂಹದ ಲಕ್ಷ್ಮಿ, ಸಂಧ್ಯಾ, ಜಾಗೃತಿ ಯುವದಳ ಹೂವಳ್ಳಿ ನಾಗರಾಜ್, ಎಂಗ್ ಇಂಡಿಯಾ ಸೊಸೈಟಿಯ ಶಂಶೀರ್, ಈ ನೆಲ ಜಲ ವೆಂಕಟಾಚಲಪತಿ ಮತ್ತು ಕೊಂಡರಾಜನಹಳ್ಳಿ ಮಂಜುಳಾರವರು ಭಾಗವಹಿಸಿದ್ದರು.