ಪ್ಲಾಸ್ಟಿಕ್ ಮಾಲಿನ್ಯ: ಅಭಿಯಾನ

ಮುನವಳ್ಳಿ,ಜೂ10 : ಸಮಿಪದ ಬಡ್ಲಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಲಯ ಅರಣ್ಯ ಇಲಾಖೆಯವರಿಂದ ಮಿಸಲು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಅಭಿಯಾನ ಜರುಗಿತು.
ಸುತ್ತಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ವಿನೊಧ ಜೈನಾಪುರ, ಗ್ರಾ.ಪಂ ಅಧ್ಯಕ್ಷ ಚಿದಂಬರ ಆಡಿನ, ಕೃಷ್ಣ ಮುನವಳ್ಳಿ, ಎನ್.ಬಿ.ನಾಯ್ಕರ, ಗ್ರಾ.ಪಂ ಸದಸ್ಯರು, ಶಾಲಾ ಶೀಕ್ಷಕರು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.