ಪ್ಲಾಸ್ಟಿಕ್ ಬಳಕೆ ನಿಷೇದ ಬಳಕೆ ಯಾದರೆ ಕಟ್ಟುನಿಟ್ಟಿನ ಕ್ರಮ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜ,24:- ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಇದೇ ಫೆಬ್ರವರಿ 15 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವ್ಯಾಪಾರ ನಡೆಸುವ ಉದ್ದಿಮೆದಾರರಿಗೆ ಹಾಗೂ ಕಿರಾಣಿ ಅಂಗಡಿ ಮಾಲೀಕರು ಸೇರಿ ದಂತೆ ಪ್ಲಾಸ್ಟಿಕ್ ಬಳಸಿ ವ್ಯಾಪಾರ ವಹಿವಾಟು ನಡೆಸುವವರಿಗೆ ಕಡ್ಡಾಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿರುವ ಬಗ್ಗೆ ಈ ಹಿಂದೆನೇ ತಿಳಿಸಲಾಗಿದೆ ಆದ್ದ ರಿಂದ ಜನವರಿ 31 ರೊಳಗೆ ಅಂಗಡಿ ಮುಗ್ಗಟ್ಟು, ಗೋದಾಮುಗಳಲ್ಲಿರುವ ಶೇಖರಣೆ ಮಾಡಿ ಇಟ್ಟಿರುವ ಪ್ಲಾಸ್ಟಿಕ್ ನ್ನು ಖಾಲಿ ಅಥವಾ ನಾಶ ಪಡಿಸಿ ಎಂದು ಖಡಕ್ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿ ಯ ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ಬಟ್ಟಲುಗಳು, ಊಟದ ಎಲೆಗಳು ಹಾಗೂ ಮೇಜಿನ ಮೇಲೆ ಹಾಸುವ ಪ್ಲಾಸ್ಟಿಕ್ ರೋಲ್‍ಗಳು, ಪ್ಲಾಸ್ಟಿಕ್ ಲೋಟಗಳನ್ನು ಉತ್ಪಾದನೆ, ಸಂಗ್ರ ಹಣೆ, ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇದಿಸಿದೆ ಎಂದರಲ್ಲದೆ, ಮುಂದಿನ ತಿಂಗಳು ಫೆಬ್ರವರಿ 15 ನಂತರ ತಮ್ಮ ಅಂಗಡಿಗಳಲ್ಲಿ ಅಥವಾ ಗೋಡಾನ್ ಗಳಲ್ಲಿ ಇಂತಹ ವಸ್ತುಗಳು ಕಂಡು ಬಂದಲ್ಲಿ ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ (ಘನತ್ಯಾಜ್ಯ ವಸ್ತು ಮತ್ತು ಪ್ಲಾಸ್ಟಿಕ್ ತ್ಯಾಜ್ಯ) ನಿಯಮ 2016 ಅಡಿಯಲ್ಲಿ ರೀತ್ಯಾ ಕನಿಷ್ಠ 100ರೂ.ಗಳು ಗರಿಷ್ಟ 5000 ರೂ.ಗಳ ವರೆಗೆ ದಂಡವನ್ನು ವಿಧಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾರಾಟ ಸಂಗ್ರಹಣೆ ದಂಡ ವಿಧಿಸಿದ ನಂತರವು ಮುಂದುವರೆಸಿದ್ದಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ 1964 ರಂತೆ ಉದ್ದಿಮೆ ಪರವಾನ ಗಿಯನ್ನು ( ಟ್ರೇಡ್ ಲೈಸನ್ಸ್) ರದ್ದು ಪಡಿಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದರು. ಪ್ಲಾಸ್ಟಿಕ್ ಬಳಕೆ ಕುರಿತು ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಪರಿಸರ ಹಾಗೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಹಾಗೂ ಅಂಗಡಿ ಮುಗ್ಗಟ್ಟು, ಕಿರಾಣಿ ಅಂಗಡಿ , ಉದ್ದಿಮೆದಾರರಿಗೆ ಕರಪತ್ರ ಹಂಚಿ ಮನದಟ್ಟು ಮಾಡಲಾಗಿದೆ ಆದ್ದರಿಂದ ಎಲ್ಲರೂ ಸಹ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ ಎಂದು ಪಟ್ಟಣದ ನಾಗರೀಕರಲ್ಲಿ ಮನವಿ ಮಾಡಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಪುರಸಭೆ ಯ ಪರಿಸರ ಅಭಿಯಂತರೆ ರೀತು ಸಿಂಗ್, ಹಿರಿಯ ಆರೋಗ್ಯ ನಿರೀಕ್ಷ ರಾಜೇಂದ್ರ, ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ಹಾಜರಿದ್ದರು.