ಪ್ಲಾಸ್ಟಿಕ್ ಬಳಕೆ ತಡೆಯಲು ಕರುನಾಡ ಕ್ರಾಂತಿ ಸೇನೆ ಡಿಸಿಗೆ ಮನವಿ ಸಲ್ಲಿಕೆ

ವಿಜಯಪುರ,ಮಾ.16:ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವಲ್ಲಿ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆಗ್ರಹಿಸಿ ಕರುನಾಡ ಕ್ರಾಂತಿ ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರದೆಲ್ಲೆಡೆ ಪ್ಲಾಸ್ಟಿಕ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ನಮ್ಮ ವಿಜಯಪುರ ನಗರವು ಹೊರತ್ತಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸಬೇಕೆಂದು ಸರ್ಕಾರವು ಅನೇಕ ನಿಯಮಗಳನ್ನು, ಯೋಜನೆಗಳನ್ನು ರೂಪಿಸುತ್ತಲೆ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಮಾತ್ರ ಪ್ರಶ್ನಾರ್ಥಕವಾಗಿದೆ. ಏಕೆಂದರೆ ವರ್ಷದಲ್ಲಿ ಒಂದೆರಡು ಬಾರಿ ಇದರ ಕುರಿತು ಕಟ್ಟುನಿಟ್ಟಿನ ಆದೇಶವಾಗಿದೆ ಎಂದು ಇದನ್ನು ತಡೆಗಟ್ಟುವ ಇಲಾಖೆ ತಮ್ಮ ಸಿಬ್ಬಂದಿಗಳಿಗೆ ಆದೇಶಿಸಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡು ಅವರಿಗೆ ದಂಡವನ್ನು ವಿಧಿಸಲಾಗುತ್ತದೆ. ಇದು ಕೆಲ ದಿನಗಳು ಅಥವಾ ಕೆಲ ಊರುಗಳಿಗೆ ಅಷ್ಟೇ ಸೀಮಿತವಾಗಿರುತ್ತದೆ. ತದನಂತರದಲ್ಲಿ ಮತ್ತೆ ಅದೇ ಕಾಯಕ ಪುನರಾರಂಭವಾಗುತ್ತದೆ. ಆದರೆ ಬಡ ವ್ಯಾಪಾರಿಗಳೇ ಮತ್ತು ಇತರೆ ಹಣ್ಣು ಮಾರುವ ವ್ಯಾಪಾರಿಗಳೇ ಇಂತಹ ಕಟ್ಟುನಿಟ್ಟಿನ ಕ್ರಮದ ಸಂದರ್ಭದ್ಲಿ ಬಾಧ್ಯಸ್ಯರಾಗಿರುವುದು ಹೆಚ್ಚಾಗಿ ಕಂಡುಬರುತ್ತದೆ ಎಂದು ಕರುನಾಡು ಕ್ರಾಂತಿ ಸೇನೆಯ ಮುಖಂಡರು ಹೇಳಿದರು.
ಪ್ಲಾಸ್ಟಿಕ ಬ್ಯಾಗ್ ಹಾಗೂ ಪರಿಸರಸಕ್ಕೆ ಹಾನಿ ಮಾಡುವ ವಸ್ತುಗಳ ತಯಾರಿಕೆ ಘಟಕಗಳ ಮೇಲೆ ಸಂಪೂರ್ಣ ನಿಷೇದ ಹೇರಿದಾಗ ಇಂತಹ ಪ್ಲಾಸ್ಟಿಕ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬಹುದಾಗಿದೆ ಮತ್ತು ಇವುಗಳು ಬದಲಾಗಿ ಇತರ ಮಾದರಿಯ ಬಳಕೆಯ ವಸ್ತುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಖುದ್ದಾಗಿ ಸರ್ಕಾರವೇ ಪೆÇ್ರೀತ್ಸಾಹ ನೀಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಬಲಿಷ್ಠ ಭಾರತ ನಿರ್ಮಾಣ ಸೇನೆ ಹಾಗೂ ಕರುನಾಡ ಕ್ರಾಂತಿ ಸೇನೆ ಸಂಸ್ಥಾಪಕ ಅಧ್ಯಕ್ಷ ಹಾಗೂ ವಕೀಲರಾದ ಪುನೀತ ಸಜ್ಜನ ಮಾತನಾಡಿ, ಕೇವಲ ದಂಡ ವಿಧಿಸಲು ಮಾತ್ರವೇ ನಿಯಮ ಜಾರಿಯಲ್ಲಿ ತರದೆ ಪರಿಸರಕ್ಕೆ ಆಗುವಂತ ಹಾನಿಯ ದೃಷಿಯಿಂದ ಕಡ್ಡಾಯವಾಗಿ ನಿಯಮ ಜಾರಿಯಲ್ಲಿ ತರಬೇಕು. ದೊಡ್ಡ ದೊಡ್ಡ ಕಂಪನಿಗಳಲ್ಲೂ ಸಹ ದಿನನಿತ್ಯ ಬಳಸುವಂತ ಸಾವಿರಾರು ವಿಧದ ಪ್ಲಾಸ್ಟಿಕ್ ಪ್ಯಾಕ್‍ಗಳ ಮೇಲೆ ನಿರ್ಬಂಧ ಹೆರಬೇಕು ಇದರ ಪರ್ಯಾಯ ಮಾರ್ಗಗಳಿಗೆ ಸರ್ಕಾರವೇ ಪೆÇ್ರೀತ್ಸಾಹಿಸಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ತಗ್ಗಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರವಿ ಗಾಯಕವಾಡ, ಸಂಭಾಜಿ ಪಾಟೀಲ, ಭೀಮಾರೆಡ್ಡಿ ಬ್ಯಾಕೋಡ, ಶಶಾಂಕ ಅಲ್ಲಿಮೋರೆ, ತೀರ್ಥಪ್ಪ ಪೂಜಾರಿ, ರವಿ ದೊಡ್ಡಮನಿ, ಪ್ರಶಾಂತ ಪಾಟೀಲ ಇತರರು ಇದ್ದರು