ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ

ಕಲಬುರಗಿ,ಜು.29: 40 ಮೈಕ್ರಾನ್ ಕಿಂತ ಕೆಳಗಿನ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ಬಳಸಿದರೆ ಅದರಲ್ಲಿರುವ ವಿಷಕಾರಿ ಟಾಕ್ಸಿನ್ ಎನ್ನುವ ರಾಸಾಯನಿಕ ನಮ್ಮ ಭೂಮಿ, ನೀರು, ಗಾಳಿಯಲ್ಲಿ ಸೇರಿ ನಮ್ಮ ಆರೋಗ್ಯಕ್ಕೆ ಮಾರಣಾಂತಿಕ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದಕ್ಕೆ ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛವಾದ ಪರಿಸರವನ್ನು ಉಡುಗೊರೆ ರೂಪದಲ್ಲಿ ಕೊಡಬಹುದು ಆದರೆ ನಾವು ಇಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸದೆ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದೇವೆ. ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸೋಣ. ನಾವು ಹೊರಗಡೆ ಹೋಗಬೇಕಾದರೆ ಮೊಬೈಲನ್ನು ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿ ಕೈ ಚೀಲಗಳನ್ನು ಮನೆಯಿಂದಲೇ ತೆಗೆದುಕೊಂಡು ಹೋಗೋಣ ಎಂದು ಕಾರ್ಯಕ್ರಮ ಉದ್ಘಾಟಿಸಿ ಜನ ಶಿಕ್ಷಣ ಸಂಸ್ಥಾನದ ಸಂಯೋಜಕರಾದ ಶ್ರೀಮತಿ ಪಾರ್ವತಿ ಹಿರೇಮಠ ರವರು ಕೆರೆ ನೀಡಿದರು.

ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ವತಿಯಿಂದ ನಡೆದ ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಡಿಯಲ್ಲಿ ಪ್ಲಾಸ್ಟಿಕ್ ನಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮವನ್ನು ನಗರದ ಕುವೆಂಪು ನಗರದಲ್ಲಿಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಟ್ರಾಫಿಕ್ ಇನ್ಸ್ಪೆಕ್ಟರ್ ಆದ ಶ್ರೀ ಭಗವಾನ್ ಬರ್ವೆ ರವರು ಮಾತನಾಡುತ್ತ ನಾವು ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನೋಡಿದರೆ ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆಯೇ ಎಂದು ಭಾಸವಾಗುತ್ತಿದೆ. ಈಗ ನಾವೆಲ್ಲರೂ ಸೇರಿ ತುರ್ತಾಗಿ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸದಿದ್ದರೆ ಇಡೀ ನಮ್ಮ ಪರಿಸರ ಪ್ಲಾಸ್ಟಿಕ್ ಮಾಲಿನ್ಯದಿಂದ ನಾಶವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು .