ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತಹ ಕೆಲಸವಾಗಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.11; ಕೊಂಡಜ್ಜಿಯ ಓಶೋ ಧ್ಯಾನ ಶಾಲಾ ಆವರಣದಲ್ಲಿ ನಗರದ ಭಾರತ ವಿಕಾಸ ಪರಿಷದ್, ಗೌತಮ ಶಾಖೆ ಹಾಗೂ ಓಶೋ ಧ್ಯಾನ ಶಾಲಾ ಸಂಯುಕ್ತಾಶ್ರಯದಲ್ಲಿ ವಿವಿದ ಬಗೆಯ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ನೆರಳಿನ ಸಸಿಗಳು, ಔಷದೀಯ ಸಸಿಗಳು ಹಾಗೂ ಪ್ರಾಣಿ – ಪಕ್ಷಿಗಳಿಗೆ ಉಪಯುಕ್ತವಾಗುವ ಸುಮಾರು 62 ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ” ವಿಷಯವಾಗಿ ಚಿಂತನ – ಮಂತನ ನಡೆಸಲಾಯಿತು, ಪರಿಸರ ವಿಕಾಸದ ಸಂಚಾಲಕರಾದ ಡಾ. ವಿವೇಕ್ ಜಿ ಭಿಡೆಯವರು ಪ್ಲಾಸ್ಟಿಕ್ ಬಳಕೆಗೆ ಮೊದಲು ಬಂದಾಗ ಜನರಲ್ಲಿ ಇದ್ದ ಕುತೂಹಲ ನಂತರದ ವರ್ಷಗಳಲ್ಲಿ ಪ್ಲಾಸ್ಟಿಕ್ ಅನಿವಾರ್ಯ ಹೇಗೆ ಆಯಿತು ಈಗ ಪರಿಸರಕ್ಕೆ ಅದರಿಂದ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಹೇಳುತ್ತಾ ಮೊದಲು ನಮ್ಮ ಮನೆಯಿಂದಲೇ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತಹ ಕೆಲಸವಾಗಬೇಕು, ಕಮ್ಮಿ ಸಮಯದಲ್ಲಿ ಅನ್ನ ಬೇಯಬೇಕೆಂದು ಪ್ರೆಷರ್ ಕುಕ್ಕರ್ ನಲ್ಲಿ ಅನ್ನ ಮಾಡುತ್ತಿದ್ದೇವೆ ಮಣ್ಣಿನ ಮಡಿಕೆಯಲ್ಲಿ ಆಹಾರ ತಯಾರಿ ಮಾಡುವುದನ್ನು ಬಿಟ್ಟಿದ್ದೇವೆ, ಇದರಿಂದ ಖನಿಜಾಂಶಗಳು ನಮ್ಮ ದೇಹಕ್ಕೆ ಸೇರುತ್ತಿಲ್ಲ, ಅನಿವಾರ್ಯತೆಯಿಂದ ಪ್ಲಾಸ್ಟಿಕ್ ಲೋಟಾ, ತಟ್ಟೆ, ಪ್ಲಾಸ್ಟಿಕ್ ಕವರ್ ಗೆ ಮಾರು ಹೋಗಿದ್ದೇವೆ ಇವುಗಳಿಂದ ಉತ್ಪತ್ತಿಯಾಗುವ ವಿಷಪದಾರ್ಥ ಬಳಸಿ ಆರೋಗ್ಯ ಹಾಗೂ ಪರಿಸರವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.ಚಿಂತನ – ಮಂಥನದಲ್ಲಿ ಭಾರತ ವಿಕಾಸ ಪರಿಷದ್ ನ ಸದಸ್ಯರು ಮತ್ತು ಓಶೋ ಮಿತ್ರುರು ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಬಗ್ಗೆ ಸಲಹೆಗಳನ್ನು ನೀಡಿದರು. ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಬಿವಿಪಿ ಯ ದಕ್ಷಿಣ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿಗಳಾದ  ತಿಪ್ಪೇಸ್ವಾಮಿ ಬಿ.ಕೆ ಮಾತನಾಡಿ ಸಂಸ್ಕಾರ ದಿಂದ ಎಲ್ಲಾ ಸಾಧ್ಯ ಭಾರತ ವಿಕಾಸ ಪರಿಷದ್ ಈ ನಿಟ್ಟಿನಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಪ್ರಸಾದ್ ಬಂಗೇರ  ಯಾವುದೇ ಆಚರಣೆಗಳು ಕೇವಲ ಸಾಂಕೇತಿಕ ಅಚರಣೆಯಾಗದೆ ಅದನ್ನು ಅಳವಡಿಸಿಕೊಂಡು ರೂಢಿಸಿಕೊಂಡಾಗ ಮಾತ್ರ ಉದ್ದೇಶ ಈಡೇರುತ್ತದೆ, ಆದುದರಿಂದ ಪರಿಸರ ಸಂರಕ್ಷಣೆಯಲ್ಲಿ ಭಾರತ ವಿಕಾಸ ಪರಿಷದ್ ನ ಸದಸ್ಯರು ಇನ್ನು ಮುಂದೆ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಸಬಾರದು ಅದರ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಪರಿಸರ ಕಾರ್ಯಕ್ರಮದಲ್ಲಿ, ಓಶೋ ಧ್ಯಾನ ಶಾಲೆಯ ಶಿವಕುಮಾರ್ ನಟರಾಜ್ ಗುಪ್ತ,  ಕರಿಬಸಪ್ಪ, ಪೃಥ್ವಿರಾಜ್ ಹಾಗೂ ಭಾರತ ವಿಕಾಸ ಪರಿಷದ್ ನ ಶೀಲಾ ನಾಯಕ್, ಬಸವರಾಜ್ ಒಡೆಯರ್, ಮಧುಕರ್, ಹಿರೇಮಠ್ ಹಾಗೂ ಬಿವಿಪಿ ಸದಸ್ಯರುಗಳು ಮತ್ತು ಓಶೋ ಮಿತ್ರುರು ಉಪಸ್ಥಿತರಿರುವರು.ಶ್ರೀಮತಿ ಭವಾನಿ ಶಂಭುಲಿಂಗಪ್ಪ ಮತ್ತು ಶೀಲಾ ನಾಯಕ್ ವಂದೇ ಮಾತರಂ ಹಾಡಿದರು, ಬಿವಿಪಿ ಕಾರ್ಯದರ್ಶಿ ಎಲ್ಲಾರನ್ನು ಸ್ವಾಗತಿಸಿದರು, ಪೃಥ್ವಿರಾಜ್ ವಂದಿಸಿದರು ಮತ್ತು ಪರಿಸರ ವಿಕಾಸದ ಸಹ ಸಂಚಾಲಕರಾದ ಸಿದ್ದೇಶ್ ಎಸ್ ಆರ್ ಕಾರ್ಯಕ್ರಮ ನಿರೂಪಿಸಿದರು.