ಪ್ಲಾಸ್ಟಿಕ್ ತ್ಯಾಜ್ಯ ಹೆಬ್ಬಾಳು ಕೆರೆಯಲ್ಲಿ ಸಂಗ್ರಹ

ಮೈಸೂರು: ನ.03:- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಹೆಬ್ಬಾಳು ಕೆರೆ ಮಲೀನವಾಗುತ್ತಿದೆ ಕಾರಣ ರಾಜಕಾಲುವೆಗಳಿಂದ ಬಂದಂತಹ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯಲ್ಲಿ ಸಂಗ್ರಹವಾಗುತ್ತಿದೆ.
ಇದರಿಂದಾಗಿ ಕೆರೆಯಲ್ಲಿ ಹೆಚ್ಚಾಗುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ ಈ ವಿಷಯವಾಗಿ ದೂರುನೀಡಿದರೆ ನಗರ ಸಭೆ ಮತ್ತು ಪಾಲಿಕೆ ನಮ್ಮಗಳ ವ್ಯಾಪ್ತಿಗೆ ಬರುವುದಿಲ್ಲವೆಂದು ಜಾರಿಕೊಳ್ಳುತ್ತಿವೆ.
ಈ ಹೆಬ್ಬಾಳು ಕೆರೆ ಉಳಿಸಿ ಹೋರಾಟ ಸಮಿತಿ ಕೆರೆಯನ್ನು ಉಳಿಸುವಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಮಾದೇಗೌಡರ ನೇತೃತ್ವದಲ್ಲಿ ಯಶಸ್ಸು ಕಂಡಿತು ನಂತರ ಇದರ ಅಭಿವೃದ್ಧಿಗೆ ಕೈ ಹಾಕಿದವರು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಸರಿ ಸುಮಾರು ಮೂವತ್ತು ಕೋಟಿ ರೂಗಳಲ್ಲಿ ಕೆರೆಯ ಅಭಿವೃದ್ಧಿ ಕಾರ್ಯವೂ ಸಾಂಗವಾಗಿ ಸಾಗಿತು ಆದರೂ ಇದರ ನಿರ್ವಾಹಣೆಯನ್ನು ಇನ್ಫೋಸಿಸ್ ಸಂಸ್ಥೆ ಮಾಡುತ್ತಿದೆ.
ಅಲ್ಲಿನ ಕಾವಲು ಇರಬಹುದು ಮತ್ತು ಉದ್ಯಾನವನ ನಿರ್ವಹಣೆ ಇಷ್ಟು ಕೆಲಸಗಳನ್ನು ನಿರ್ವಹಿಸುತ್ತಿದೆ ಆದರೆ ಕೆರೆಯ ತ್ಯಾಜ್ಯವನ್ನು ತೆರವುಗೊಳಿಸಲು ಅಸಮರ್ಥವಾಗಿರುವ ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.