ಪ್ಲಾಸ್ಟಿಕ್ ಚಹಾ ಕಪ್ ನಿಷೇಧಕ್ಕೆ ಆಗ್ರಹ

ರಾಯಚೂರು, ಮಾ.೧೫- ಪ್ಲಾಸ್ಟಿಕ್ ಚಹಾ ಕಪ್ ನಿಷೇಧ ಮಾಡಬೇಕು. ಕಪ್ ತಯಾರಿಕ ಅಂಗಡಿಗಳನ್ನು ತಕ್ಷಣವೇ ಬೀಗ ಮುದ್ರೆ ಹಾಕಬೇಕು ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಣಧೀರ ಪಡೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಪ್ಲಾಸ್ಟಿಕ್ ಕಪ್ ನಲ್ಲಿ ಚಹಾ ಸೇವಿಸುವುದರಿಂದ ದೇಹಕ್ಕೆ ಪ್ಲಾಸ್ಟಿಕ್ ಕಣಗಳು ಸೇರಿಕೊಂಡು ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುವದರಿಂದ ತಕ್ಷಣವೇ ಪ್ಲಾಸ್ಟಿಕ್ ಕಪ್ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.
ಖರಗ್‌ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ ಪ್ರತಿನಿತ್ಯ ಪೇಪರ್ ಕಪ್‌ನಲ್ಲಿ ಚಹಾ ಸೇವಿಸುವುದರಿಂದ ೭೫ ಸಾವಿರ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಹೋಗುತ್ತವೆ ಪೇಪರ್ ಕಪ್‌ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದ ವೇಳೆ ಸೂಕ್ಷ್ಮ ಪ್ಲಾಸ್ಟಿಕ್ ಗಳು ಹಾಗೂ ವಿಷಕಾರಿ ಅಂಶಗಳು ದೇಹಕ್ಕೆ ಸೇರಿಕೊಳ್ಳುತ್ತೇವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ಪೇಪರ್ ಕಪ್ ತೆಳುವಾದ ಪ್ಲಾಸ್ಟಿಕ್ ಪದರವನ್ನು ಹೊಂದಿರುತ್ತವೆ. ಹೀಗಿ ೧೫ ನಿಮಿಷದಲ್ಲಿ ಅವು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್ ತಿಳಿಸಿದ್ದಾರೆ. ನಾವು ಹಸಿದ ಸಂಶೋಧನೆಯಿಂದ ೧೦೦ ಎಂಎಲ್ ಬಿಸಿ ನೀರನ್ನು ಪೇಪರ್ ಕಪ್‌ಗಳಲ್ಲಿ ೧೫ ಸಿಮಿಷಗಳ ಕಾಲ ಇಟ್ಟರೆ ೫,೦೦೦ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆ ಆಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ಸರ್ಕಾರವು ಪ್ಲಾಸ್ಟಿಕ್ ಪೇಪಗಳನ್ನು ನಿಷೇಧಿಸಿದ್ದರೂ ಸಹ ಸರ್ಕವರೆಗೆ ಹಾಗೂ ಗಂಜ್ ಪಟೇಲ್ ರಸ್ತೆಯಲ್ಲಿ ಬರುವ ಆಹಾ ಅಂಗಡಿಗಳಲ್ಲಿ ಮತ್ತು ಆಟ್ಟಂ ಬಂಗಾರದ ಅ೦ಗಡಿ ಪಕ್ಕದಲ್ಲಿ ಯಥೇಚ್ಛವಾಗಿ ಬೇಪ ಚಹ ಕಪ್‌ಗಳನ್ನು ತಯಾರಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ನೇರವಾಗಿ ದುಷ್ಟರಿದು ಬೇಡುತ್ತಿದ್ದು, ನಗರಸಭೆಯ ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ, ಪೇಪರ್ ಚಹಾ ಕಪ್‌ಗಳನ್ನು ನಿಷೇಧಿಸಬೇಕು. ಹಾಗೂ ಈ ತಯಾರಿಕಾ ಅಂಗಡಿಗಳನ್ನು ತಕ್ಷಣ ಬೀಗಮುದ ಹಾಕಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧೀಪ್ ಕುಮಾರ, ರಮೇಶ, ಶಿವರಾಜ, ಬಸವರಾಜ ಸೇರಿದಂತೆ ಉಪಸ್ಥಿತರಿದ್ದರು.