ಪ್ಲಾಸ್ಟಿಕ್ ಅಕ್ಕಿ ವಿವಾದ – ಪರಿಶೀಲನೆ

ರಾಯಚೂರು.ಜು.೧೯- ಸಿಂಗನೋಡಿ ಗ್ರಾಮದಲ್ಲಿ ಪ್ಲಾಸ್ಟಿಕ್ ಅಕ್ಕಿಯ ವಿಷಯ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ತಿಳಿಸಿದರು.
ಸಿಂಗನೋಡಿ ಗ್ರಾಮದಲ್ಲಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯ ಪತ್ತೆ ವಿಷಯ ಬಗ್ಗೆ ತಿಳಿದು ಬಂದಿದೆ. ಈ ಅಕ್ಕಿ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನು ವಿಚಾರಿಸುತ್ತೇನೆ. ಯಾವ ಕಾರಣಕ್ಕೂ ಈ ಅಕ್ಕಿ ಪಡಿತರ ಅಕ್ಕಿಯಲ್ಲಿ ಸೇರಿದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಕೇಳಲಾಗುತ್ತದೆ. ಅಲ್ಲದೆ, ಸಿಂಗನೋಡಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಬಗ್ಗೆ ಜನರಿಂದ ಮಾಹಿತಿ ಪಡೆಯಲಾಗುತ್ತದೆ. ಪಡಿತರ ಅಕ್ಕಿಯಲ್ಲಿ ಸಿಂಗನೋಡಿ ಗ್ರಾಮದಲ್ಲಿ ಪತ್ತೆಯಾದ ಅಕ್ಕಿಯ ಕಾಳು ಪ್ಲಾಸ್ಟಿಕ್ ಅಕ್ಕಿಯೆ ಎನ್ನುವ ಬಗ್ಗೆ ವಿಚಾರಿಸಲಾಗುತ್ತದೆ. ಇದರಲ್ಲಿ ಏನಾದರೂ ಲೋಪದೋಷಗಳಿದ್ದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದರು.