ಪ್ಲಾಸ್ಟಿಕ್‌ ಮುಕ್ತ ಪಟ್ಟಣಕ್ಕೆ ಶ್ರಮಿಸೋಣ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 28 : ಪರಿಶುದ್ಧ ಬೆಳಕು, ಗಾಳಿ, ನೀರು ಮತ್ತು ಆಹಾರದಿಂದ ಮಾತ್ರ ಗುಣಮಟ್ಟದ ಆರೋಗ್ಯ ಕಾಪಾಡಲು ಸಾಧ್ಯ. ಹೀಗಾಗಿ ಆಹಾರದಲ್ಲಿಪ್ಲಾಸ್ಟಿಕ್‌ ಸೇರದಂತೆ ಜಾಗೃತಿ ವಹಿಸಬೇಕು ಎಂದು ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ನಸುರುಲ್ ಹೇಳಿದರು.ಪಟ್ಟಣದ ಮರಿಕೊಟ್ಟೂರೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಆರಂಭವಾದ ಪ್ಲಾಸ್ಟಿಕ್ ಮುಕ್ತ ಪಟ್ಟಣ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.ಪ್ರತಿಯೊಬ್ಬರು ಮನೆಯಲ್ಲಿಅಡುಗೆ ಮಾಡುವಾಗ ಪ್ಲಾಸ್ಟಿಕ್‌ ಸುಡುವುದನ್ನು ತ್ಯಜಿಸಬೇಕು ಎಂದರು. ಈ  ಸಂದರ್ಭದಲ್ಲಿ ಪರಸಪ್ಪ,ಕೊಟ್ರೇಶ ಸೇರಿದಂತೆ ಅನೇಕ ರಿದ್ದರು