ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಯಾರಿಕೆ ಯಾವುದೇ ಕ್ರಮವಿಲ್ಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.16: ನಗರದಲ್ಲಿ ಮತ್ತು ಹೊರಗಡೆ ಊರುಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ವಿಗ್ರಹಗಳನ್ನು ತಯಾರಿಸಿ ಮಾರಾಟ ಮತ್ತು ಖರೀದಿ ನಿಷೇಧದ ನಡುವೆಯೂ ನಡೆದಿದ್ದು ಇದನ್ನು ನಿಯಂತ್ರಿಸಲು ಈ ವರೆಗೆ ಯಾವುದೇ ಕ್ರಮ ಜರುಗಿರುವುದು ಕಂಡು ಬಂದಿಲ್ಲ.
ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಶ್ ನಿಂದ ಗಣೇಶನ ಮೂರ್ತಿಗಳನ್ನು ತಯಾರಿಸಬಾರದು, ಉಪಯೋಗಿಸಬಾರದೆಂದು ಜಿಲ್ಲಾಡಳಿತ, ಪಾಲಿಕೆ, ಸ್ಥಳೀಯ ಸಂಸ್ಥೆಗಳು ಆದೇಶ ಹೊರಡಿಸಿ ಪತ್ರಿಕಾ ಹೇಳಿಕೆ ನೀಡಿವೆ.
ಈ ಹೇಳಿಕೆ ಕೇವಲ ಮಾಧ್ಯಮಗಳಿಗೆ ನಿರ್ಮಿತವಾದಂತೆ ಕಾಣುತ್ತಿದೆ. ನಗರದಲ್ಲಿ ಈಗಾಗಲೇ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಪ್ರಕ್ರಿಯೆ ನಡೆದಿದ್ದರೂ ಇಂತಹುದನ್ನು ತಡೆಯುವ ಕಾರ್ಯ ನಡೆದಿಲ್ಲದಿರುವುದು. ವಿಷಾದದ ಸಂಗತಿಯಾಗಿದೆ.
ಪರಿಸರ ಪ್ರೇಮಿಗಳು ಕಳೆದ ಕೆಲ ವರ್ಷಗಳಿಂದ ಮಣ್ಣಿನಿಂದ ತಯಾರಿಸಿದ ರಸಾಯನಿಕ ರಹಿತ ಬಣ್ಣದ ಗಣೇಶ ಮೂರ್ತಿಗಳನ್ನು ಬಯಸುತ್ತಿದ್ದಾರೆ. ಆದರೆ ಇವು ಒಂದಿಷ್ಟು ಬೆಲೆ ಹೆಚ್ಚಾಗಲಿವೆ. ಕಡಿಮೆ ಬೆಲೆ, ಮತ್ತು ನೋಡಲು ಆಕರ್ಷಕ ಎಂದು ಪ್ಲಾಸ್ಟರ್ ಆಫ್ ವ್ಯಾರೀಸ್ ಗಣಪನ ಖರೀದಿಗೂ ಜನ ಮುಂದಾಗುತ್ತಿದ್ದಾರೆ.
ಇವುಗಳ ಮಾರಾಟದ ಮೇಲೆ, ಸ್ಥಳೀಯ ಆಡಳಿತ, ಪೊಲೀಸರಿಂದ ದಿಟ್ಟ ಕ್ರಮ ಜರುಗಿಸಬೇಕಿದೆ. ಅಲ್ಲದೆ ಜನರು ಸಹ ಇಂತಹವುಗಳ ಖರೀದಿಗೆ ಮುಂದಾಗಬೇಕಿದೆ.
ನಗರದಲ್ಲಿ ಗಣೇಶ ಮಿತ್ರಮಂಡಳಿ, ಸಂಘ, ಸಮಿತಿ, ಬಳಗಗಳು ವಿನಾಯಕನನ್ನು ವಿವಿಧ ರೀತಿಯಲ್ಲಿ ಪ್ರತಿಷ್ಠಾಪಿಸಿ ಸಂಭ್ರಮದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.
ಇದಕ್ಕೆ ಹಲವಾರು ನಿಯಮ ವಿಧಿಸಿ ಗಾಂಧಿ ನಗರ ಠಾಣೆಯಲ್ಲಿ ಸಿಂಗಲ್ ವಿಂಡೋದಡಿ ಅನುಮತಿ ನೀಡಲಾಗುತ್ತಿದೆ.
ಕೋಟ್:
ನಗರದಲ್ಲಿ 250ಕ್ಕೂ ಹೆಚ್ಚು ಕಡೆ ಗಣೇಶನ ಪ್ರತಿಷ್ಠಾಪಿಸಬಹುದು ಇಂದು ಮಧ್ಯಾಹ್ನವರೆಗೆ 150ಕ್ಕೂ ಹೆಚ್ಚು ಜನ ಅರ್ಜಿ ಪಡೆದಿದ್ದಾರೆ. ಶೇಖರಪ್ಪ, ನಗರ ಡಿವೈಎಸ್ಪಿ ಬಳ್ಳಾರಿ.