ಪ್ಲಾವ ನಾಮಸಂವತ್ಸರದ ಪಂಚಾಂಗದಿನದರ್ಶಿಕೆ ಬಿಡುಗಡೆ

ಕೆ.ಆರ್.ಪೇಟೆ:ಏ:18: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಈಶ್ವರ ದೇವಸ್ಥಾವು ಹೊರತಂದಿರುವ ಯುಗಾದಿಯಿಂದ ಯುಗಾದಿಯವರೆವಿಗಿನ ಪ್ಲಾವ ನಾಮಸಂವತ್ಸರದ ಪಂಚಾಂಗದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಾಂಸ್ಕøತಿಕ ಚಿಂತಕರಾದ ವೇ.ಬ್ರ.ಗೋಪಾಲಕೃಷ್ನ ಅವದಾನಿಯವರು ಪ್ರತಿಯೊಬ್ಬರು ದಿನ, ಮುಹೂರ್ತ, ರಾಹುಕಾಲ, ಗುಳಿಕಕಾಲ, ನಕ್ಷತ್ರಗಳ ರಾಶಿ ಫಲ, ಮಳೆನಕ್ಷತ್ರಗಳನ್ನು ತಿಳಿಯಲು ಅನು ಕೂವಾಗುವಂತೆ ನಮ್ಮ ಪೂರ್ವಿಕರು ತಯಾ ರಿಸಿರುವ ಪಂಚಾಂಗವನ್ನು ಆಧರಿಸಿ ನೂತನ ಪಂಚಾಂಗ ದರ್ಶಿನಿಯನ್ನು ದೇವಸ್ಥಾನವು ದಾನಿಗಳ ನೆರವಿನಿಂದ ತಯಾರಿಸಿದೆ.
ಈ ಯುಗಾದಿಯಿಂದ ಮುಂದಿನ ಯುಗಾದಿ ಯವರೆವಿಗೆ ಎಲ್ಲಾ ಬಗೆಯ ಉಪಯುಕ್ತ ಮಾಹಿತಿಯನ್ನು ಈ ದಿನದರ್ಶಿಕೆ ಒಳಗೊಂ ಡಿದ್ದು ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತ ದೇಶದ ಧರ್ಮಶಾಸ್ತ್ರಗಳು, ವೇದಗಳು ಹಾಗೂ ನಕ್ಷತ್ರ ಫಲಗಳಿಗೆ ವಿಶ್ವಕ್ಕೇ ಮಾದರಿಯಾಗಿವೆ. ಮಳೆಯ ನಕ್ಷತ್ರಗಳು ನಿಗಧಿಯಾದ ಸಮಯದಲ್ಲಿ ಮಳೆಗಳು ಬರು ವುದು ನಿಜವಾಗಿದೆ. ಪಂಚಾಂಗದಂತೆ ನಮ್ಮ ಗೋಚಾರ ರಾಶಿಫಲಗಳು ಸತ್ಯವಾಗುತ್ತಿವೆ. ಹಿಂದೂ ಧರ್ಮೀಯರಿಗೆ ಯುಗಾದಿ ಹೊಸ ವರ್ಷವಾಗಿದೆ.
ಅತ್ಯಾಧುನಿಕ ತಂತ್ರಜ್ಞಾನಕ್ಕೆ ಅನುಕೂಲವಾಗುವಂತೆ ವೇದ ಮಂತ್ರಗಳನ್ನು ಎಲೆಕ್ಟ್ರಾನಿಕ್ ಡೀಕೋಡ ರ್‍ಗಳನ್ನು ಬಳಿಸಿಕೊಂಡು ಕ್ಯಾಲೆಂಡರ್ ಹಾಳೆ ಗಳಿಗೆ ಅಳವಡಿಸಲಾಗಿದೆ ಈ ಕಾರ್ಯಕ್ಕೆ ದೇವ ಸ್ಥಾನದ ಅರ್ಚಕರಾದ ಮಾಲತೇಶಭಟ್ಟರು ಮತ್ತು ರೋಹಿತ್‍ಶರ್ಮ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಘುರಾಮನಾಡಿಗ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಅರ್ಚಕರಾದ ಮಾಲತೇಶಭಟ್ಟರು ಮತ್ತು ರೋಹಿತ್‍ಶರ್ಮ, ಪ್ರಸನ್ನ ಶಾಸ್ತ್ರಿ, ಪೋಷ್ಟ್ ಮಾಸ್ತರ್ ನರಸಿಂಹ ಸ್ವಾಮಿ ವೈದ್ಯÀ ಡಾ. ಪಿ.ಎನ್.ನಾಗೇಂದ್ರಗುಪ್ತ, ಸಮಾಜ ಸೇವಕರಾದ ಸಿ.ಕೆ.ಪರಿಮಳಾ ನಾಗರಾಜಶೆಟ್ಟಿ, ನಿರ್ಮಲಾ ನಾಗೇಂದ್ರಗುಪ್ತ ಸೇರಿದಂತೆ ಹಲವು ಗಣ್ಯರು ಇದ್ದರು.