ಪ್ರ್ರಾಕೃತಿಕ ಸಂಪನ್ಮೂಲಗಳನ್ನು ಹಾಳು ಮಾಡಿದರೆ ದೇಶ ದ್ರೋಹ ಮಾಡಿದಂತೆ : ಡಾ. ಹಂಗಾರಗಿ

ಬೀದರ್: ಜು.22:ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಘೋಡಂಪಳ್ಳಿ, ಬೀದರ. ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ. ರಾಷ್ಟೀಯ ಸೇವಾ ಯೋಜನೆ ಕಾಯ್ರಕಾಮದ ನಿಮಿತ್ಯ ರಿಲಾಯನ್ಸ ಫೌಂಡೇಶನ್ ಬೀದರ ಇವರ ಸಹಯೋಗದಲ್ಲಿ 200 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯ ಮಾಡಲು ವಿದ್ಯಾರ್ಥಿಗಳಿಗೆ 10 ಜನರಿಗೆ 5ಮರಗಳನ್ನು ದತ್ತು ಕೊಡಲಾಯಿತು. ಈ ಕಾರ್ಯಕಮದಲ್ಲಿ ಶ್ರೀ ಮಹೇಶ್ ಕಣಜಿ ಯವರು ರಿಲಾಯನ್ಸ ಫೌಂಡೇಶನ್ ಯಾವ ರೀತಿ ಪರಿಸರ ರಕ್ಷಣೆಯಲ್ಲಿ ಕಳೆದ 12ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದು ವಿವರವಾಗಿ ತಿಳಿಸಿದರು. ಡಾ. ಸಂತೋಷಕುಮಾರ ಹಂಗಾರಗಿ ಪರಿಸರ ಮಾಲಿನ್ಯದ ಕುರಿತು ಇಂದಿನ ಯುವ ಪೀಳಿಗೆ ತಮ್ಮ ತಮ್ಮ ಜವಾಬ್ದಾರಿ ಅರಿತು ನಡೆದರೆ ದೇಶದ ಅಭಿವೃದ್ಧಿಗೆ ಸಹಕಾರಿ ಯಾಗಬೇಕು ಎಂದು ಕರೆ ಕೊಟ್ಟರು. ಇಂದಿನ ನಮ್ಮ ಜೀವನ ಶೈಲಿ ಇಂದ ಪರಿಸರಕ್ಕೆ ಒಳಿತಿಗಿಂತ ಕೆಡಕು ಹೆಚ್ಚಿದೆ. ಅದಕ್ಕಾಗಿ ನಮ್ಮ ಜೀವನ ವಿಧಾನ ಪರಿಸರಕ್ಕೆ ತಕ್ಕ ಹಾಗೆ ಬದಲಿಸಿಕೊಳ್ಳಬೇಕು ಎಂದರು. ಪ್ರಕೃತಿಕ ಸಂಪನ್ಮೂಲಗಳನ್ನು ಹಾಳು ಮಾಡಿದರೆ ದೇಶದ್ರೋಹ ಮಾಡಿದ ಹಾಗೆ ಅದಕ್ಕಾಗಿ ನಮ್ಮ ದೇಶ ನಮ್ಮ ಸಂಪನ್ಮೂಲಗಳು ನಮ್ಮ ಜವಾಬ್ದಾರಿ ಇದೆ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಕರೆ ಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನು ವಾಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೇವಿದಾಸ ತುಮಕುಂಟೆ ವಹಿಸಿಕೊಂಡು ಅಧ್ಯಕ್ಷಯ ನುಡಿಗಳನ್ನು ನುಡಿದರು. ಇದೆ ಸಂದರ್ಭದಲ್ಲಿ ಪೆÇ್ರ. ನಾಮದೇವ, ಪೆÇ್ರ ಗಂಗಾರಾಮ ವೇದಿಕೆಯಮೇಲೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಬಿ. ಎ 2ನೇ ಸೆಮಿಸ್ಟರ್ ವಿದ್ಯಾರ್ಥಿಯಾದ ಶ್ರೀ ಬಾಲಾಜಿ ನಿರೂಪಿದರೆ, ಸಂದೇಶ್ ಸ್ವಾಗತ ಕೋರಿದರು, ಹಾಗೂ ಜಯಸೂರ್ಯ ವಂದನೆಗಳನು ಹೇಳಿದರು. ಈ ಕಾರ್ಯಕ್ರಮದಲಿ ವಿದ್ಯಾರ್ಥಿಗಳು, ಅಧ್ಯಾಪಕರು. ಮತ್ತು ಸಿಬ್ಬಂದಿಗಳು ಹಾಜರಿದ್ದರು.