ಪ್ರೌಢ ಶಾಲೆ ಶಿಕ್ಷಕರ ಕೊರತೆ ನೀಗಿಸಬೇಕೆಂದು ಕರವೇಯಿಂದ ಮನವಿ

ಕಲಬುರಗಿ: ಆ.12: ಸೇಡಂ ತಾಲೂಕಿನಾದ್ಯಾಂತ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ಕೊರತೆ ನೀಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸರಕಾರದ ನಿಯಮದ ಪ್ರಕಾರ ಶಿಕ್ಷಕರಿಗೆ ವರ್ಗಾವಣೆ ಮಾಡಿದ್ದಿರಿ ಅದರ ಕೆಲವು ಶಾಲೆಗಳಲ್ಲಿ ಉದಾಹರಣೆಗೆ ಮದನಾ, ಕಡಚರ್ಲಾ, ವೆಂಕಟಾಪೂರ, ಕಡತಾಲ, ಜಾಕನದಲ್ಲಿ, ಮುನಕನಪಲ್ಲಿ, ರಿಬ್ಬನದಲ್ಲಿ ಇನ್ನು ಅನೇಕ ತಾಲೂಕಿನ ಹಳ್ಳಿಗಳಲ್ಲಿ ಒಬ್ಬರೂ ಸಹ ಸರಕಾರಿ ಶಿಕ್ಷಕರು ಇಲ್ಲದಂತ ವರ್ಗಾವಣೆ ಮಾಡಿದ್ದು ಯಾವ ನ್ಯಾಯ, ಮೊದಲೆ ನಮ್ಮ ತಾಲೂಕು ಶಿಕ್ಷಣದಿಂದ ಹಿಂದುಳಿದಿದೆ. ತಾತ್ಕಾಲಿಕ ಶಿಕ್ಷಕರ ಮೇಲೆ ಹೇಗೆ ಶಾಲೆಗಳು ನಡೆಯುತ್ತವೆ.

ಶಾಲೆಗಳಲ್ಲಿ ಅಭೀವೃದ್ಧಿ ಕೆಲಸಗಳು ಹೇಗೆ ಸಾಧ್ಯ. ಹಳ್ಳಿಯ ವಿದ್ಯಾರ್ಥಿಗಳ ಭವಿಷ್ಯದ ಜೋತೆ ಸರಕಾರ ಚೆಲ್ಲಾಟ ಆಡುತ್ತಿರುವದು ಖಂಡನೀಯ, ಗ್ರಾಮೀಣ ಪ್ರದೇಶದಲ್ಲಿ ಮೊದಲ ಶಿಕ್ಷಕರ ಕೊರತೆ ಬಹಳಷ್ಟು ಕಾಡುತ್ತಿದ್ದು, ಶಿಕ್ಷಣದಿಂದ ಅನೇಕ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ, ಮತ್ತೆ ವರ್ಗಾವಣೆ ಮಾಡುವುದರಿಂದ ವಿದ್ಯರ್ಥಿಗಳ ಭವಿಷ್ಯಕ್ಕೆ ಬರೆ ಎಳೆದಂತಾಗಿದೆ. ಆದ್ದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷರನ್ನು ನೇಮಿಸಬೇಕು ಮತ್ತು ಯಾವುದೇ ಕಾರಣಕ್ಕೆ ಆ ಶಾಲೆಗೆ ಬೇರೆ ಶಿಕ್ಷಕರು ಬರುವವರೆಗೆ ಯಾವುದೇ ಕಾರಣಕ್ಕೆ ವರ್ಗಾವಣೆ ಮಾಡಬಾರದು ಮತ್ತು ಅತೀ ಶೀಘ್ರದಲ್ಲಿ ಸರಕಾರದಿಂದ ಶಿಕ್ಷಕರನ್ನು ನೇಮಿಸಿ ಹಳ್ಳಿಯ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಾಲಕರ ಜೊತೆಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ, ಮತ್ತು ಕಲಬುರಗಿ ಜಿಲ್ಲಾಧ್ಯಕ್ಷ ಮಾನಸಿಂಗ ಆರ್ ಚವ್ಹಾಣ, ಸೇಡಂ ತಾಲ್ಲೂಕ ಅಧ್ಯಕ್ಷ ರಾಮಚಂದ್ರ ಗುತ್ತೆದಾರ, ಆಳಂದ ತಾಲ್ಲೂಕು ಅಧ್ಯಕ್ಷ ಮದಾರ್ ಶೇಖ, ಜಿಲ್ಲಾ ಉಪಾಧ್ಯಕ್ಷ ಗೌಸ್ ಶೇಖ, ಕಲ್ಯಾಣ ಕರ್ನಾಟಕ ಮುಖಂಡ ಸಂತೋಷ್ ಚೌದ್ರಿ, ಆಳಂದ ತಾಲ್ಲೂಕು ಉಪಾಧ್ಯಕ್ಷ ಸಚಿನ್ ಪಾತ್ರೆ, ಜಿಲ್ಲಾ ಸಂಚಾಲಕ ಶರಣು ಮಡಿವಾಳ, ಜಿಲ್ಲಾ ಸಹ ಸಂಚಾಲಕ ಸಿದ್ದು ಪೂಜಾರಿ, ನಿವಾಸ್ ಕಿಡ್ಡಿ, ಗುಂಡಪ್ಪ ಪೂಜಾರಿ, ಮಲ್ಲಿಕಾರ್ಜುನ ಕಾಲವಾರ್, ರವಿಸಿಂಗ ಇಮಾಡಪೂರ, ರಾಘವೇಂದ್ರ ಖಡ್ಗಾಂಚಿ, ಮಹೇಶ್ ರೆಡ್ಡಿ, ಭೀಮಯ್ಯ ಕುಲಾಲ್, ಸಿಧ್ಧಲಿಂಗಪ್ಪ, ಚಂದ್ರಶೇಖರ ಮಡಿವಾಳ, ಅನಿಲ್, ಗುರುಲಿಂಗಯ್ಯ ಸ್ವಾಮಿ, ಖಂಡೆಪ್ಪಾ, ಮಲಪ್ಪ ಪೂಜಾರಿ, ಚೆನ್ನಬಸಪ್ಪ ಬೆನಕನಹಳ್ಳಿ, ನರಸಪ್ಪ ಪೂಜಾರಿ ಸೇರಿದಂತೆ ಕರವೇ ಪದಾಧಿಕಾರಿಗಳು ಇದ್ದರು.