ಪ್ರೌಢಶಾಲೆ ಅಭಿವೃದ್ಧಿಗೆ ಮನವಿ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು2: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಸಮಗ್ರ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಸದಸ್ಯರು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಮನವಿ ಸಲ್ಲಿಸಿದರು.
ಇಡೀ ರಾಜ್ಯದಲ್ಲಿ 111 ವರ್ಷ ಪೂರೈಸಿದ ನಾಲ್ಕಾರು ಪ್ರೌಢಶಾಲೆಗಳಲ್ಲಿ ಜಿಲ್ಲೆಯ ಸರದಾರ ಹೈಸ್ಕೂಲ್ ಮತ್ತು ಬೈಲಹೊಂಗಲದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ (ಎಂ.ಜೆ.ಹೈಸ್ಕೂಲ್) ಮಾತ್ರ ಇವೆ. 111 ವರ್ಷಗಳ ಇತಿಹಾಸದ ಐತಿಹಾಸಿಕ ಸ್ಮಾರಕವಾಗಿರುವ ರಾಯಣ್ಣ ಪ್ರೌಢಶಾಲೆ ಪಟ್ಟಣ, ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಬದುಕಿಗೆ ಬೆಳಕಾಗುವ ಮೂಲಕ ಈ ಭಾಗದಲ್ಲಿ ಅಚ್ಚುಮೆಚ್ಚಿನ ಶಾಲೆಯಾಗಿ ಹೊರಹೊಮ್ಮಿದೆ. ಶಾಲೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆ ಮಕ್ಕಳು ಒಳ್ಳೆಯ ವಿದ್ಯಾವಂತರಾದರೆ, ನಾಡಿನ ಬೆಳವಣಿಗೆಗೆ, ಪ್ರತಿ ಕುಟುಂಬದಲ್ಲಿ ವಿದ್ಯೆಯ ಪ್ರಸರಣವಾಗಿ ಮನೆತನಗಳು ಬೆಳೆದು ಬರಲು ಕಾರಣವಾಗಲಿದೆ. ಒಳ್ಳೆಯ ಶಿಕ್ಷಣ ನೀಡುತ್ತಿರುವ ಶಾಲೆಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ,
ಮುಖಂಡರಾದ ಅಶೋಕ ರಾವುಳ, ಶ್ರೀಶೈಲ ಹಂಪಿಹೊಳಿ, ರವಿ ಹುಲಕುಂದ, ಶರೀಫ ನದಾಫ, ಪ್ರಕಾಶ ಬೆಳಗಾವಿ, ಯುನುಸ್ ಬಡೆಘರ ಇದ್ದರು.