ಪ್ರೌಢಶಾಲೆಗೆ ಗ್ರೀನ್ ಬೋರ್ಡ್ ಕೊಡುಗೆ

ಹುಬ್ಬಳ್ಳಿ,ಎ20: ನಗರದ ಗೋಕುಲ್ ರಸ್ತೆಯ ಗಾಂಧಿನಗರದ ವೇಮನ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಕೊಠಡಿಗಳಿಗೆ ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ ವತಿಯಿಂದ ಅಧ್ಯಕ್ಷ ನರಸಿಂಹಮೂರ್ತಿಯವರು ಗ್ರೀನ್ ಬೋರ್ಡ್ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಆರ್. ಪಿ. ಸಿಂಗರಡ್ಡಿ ಮಾತನಾಡಿ ರೋಟರಿ ಕ್ಲಬ್ ನಿಂದ ಈ ಮೊದಲು ಕೊರೊನಾ ಸಮಯದಲ್ಲಿ ಮಾಸ್ಕ್, ಹಾಗೂ ಸ್ಯಾನಿಟರಿಗಳನ್ನು ಮಕ್ಕಳ ಆರೋಗ್ಯ ಮತ್ತು ವಿಧ್ಯಾಭ್ಯಾಸಕ್ಕಾಗಿ ಸಹಾಯ ನೀಡಿ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪಾಧ್ಯಾಯಿನಿ ಮಾತನಾಡಿ ವಿದ್ಯಾರ್ಥಿಗಳು ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ಶ್ರಮವಹಿಸಿ ಅಭ್ಯಾಸ ಮಾಡಿ ಶಾಲೆಗೆ ಉತ್ತಮ ಕೀರ್ತಿತರಲು ನಾವು ಸಹಿತ ದುಡಿಯುತ್ತಿದ್ದೇವೆ ಎಂದು ಉತ್ತೇಜನ ನೀಡಿದರು.
ಈ ಸಂದರ್ಭದಲ್ಲಿ ಆರ್.ಎನ್. ಸೋಮನಗೌಡರ, ಜಿ.ಜಿ.ಹೀರೇಗೌಡ್ರ, ಪ್ರಕಾಶ ರಡ್ಡೇರ, ಎಮ್.ಎಮ್.ಹೊಸಮನಿ, ರಾಜೀವ ಎನ್. ಚೌದರಿ, ಎಮ್.ಪುರಾಣಿಕಮಠ, ರೋಟರಿ ಸದ್ಯರಾದ ಪಪ್ಪು ವೆಂಕಟೇಶ, ವಿ. ಮುದರಡ್ಡಿ, ಸುದೀರ ಹಾರವಾಡ, ಫಣಿರಾಜ ಭರತೇಶ ಬನ್ನಾಡೆ, ವಿದ್ಯಾರ್ಥಿ ವೃಂದ ಹಾಗೂ ಮುಂತಾವರು ಉಪಸ್ಥಿತರಿದ್ದರು