ಪ್ರೌಢಶಾಲಾ ಸಹಶಿಕ್ಷಕರ ಸಂಘಕ್ಕೆ ನಾಮನಿರ್ದೇಶಿತರು ಆಯ್ಕೆ

ಹರಪನಹಳ್ಳಿ.ಸೆ.೧೬ : ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷರ ರಾಜಿನಾಮೆಯಿಂದ ತೆರವಾದ ತಾಲೂಕು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಹ ಕಾರ್ಯದರ್ಶಿಯಾದ ಮುಕಬುಲ್ ಭಾಷಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಸಂಘದ ಕಾರ್ಯಾಧ್ಯಕ್ಷರಾಗಿ ಲತಾ ರಾಥೋಡ್, ಗೌರವಾಧ್ಯಕ್ಷರಾಗಿ. ಎಸ್.ವೀರೇಶ್.ಉಪಾಧ್ಯಕ್ಷರಾಗಿ ಡಾ.ಚೇತನ್ ಬಣಕಾರ್,ಕೆ.ದಯಾನಂದ್,ಹೆಚ್.ಚAದ್ರಪ್ಪ,ಸದಾಶಿವ,ಬಿ.ಗೌರವ ಕಾರ್ಯದರ್ಶಿಯಾಗಿ ಮಲ್ಲಪ್ಪ ದಳವಾಯಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಿ. ಶಶಿಕಲಾ. ಮಹಿಳಾ ಸಹ ಕಾರ್ಯದರ್ಶಿಯಾಗಿ ಶಭಾನ.ಎಸ್, ಎ.ಜಿಲ್ಲಾ ಪ್ರತಿನಿಧಿಯಾಗಿ ಲಕ್ಯ ನಾಯ್ಕ್,ಗೌರವ ಸಲಹೆಗಾರರಾಗಿ ಲೋಕೇಶ್, ಇವರನ್ನು ಆಯ್ಕೆ ಮಾಡಲಾಯಿತು.ಪ್ರೌಢಶಾಲಾ ಸಹಶಿಕ್ಷಕರ ಸಂಘದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಂಘವನ್ನು ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಲಾಯಿತು. ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಣೆ ಮಾಡುವುದು,ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕೆAದು ತೀರ್ಮಾನಿಸಲಾಯಿತು,ಈ ಸಂದರ್ಭದಲ್ಲಿ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಡಾ.ಚೇತನ್ ಬಣಕಾರ್, ಮತ್ತು ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಲಿಂಗರಾಜ್ ನೇವರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಶಿಕ್ಷಕ ಗುರು ಮೂರ್ತಿ, ಬೋರಯ್ಯ ,ಬಿ.ಸೂರ್ಯ ನಾಯ್ಕ,ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳು ಹಾಜರಿದ್ದರು.