ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

ಕೆ.ಆರ್.ಪೇಟೆ.ಡಿ.25: ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು ತಿಳಿಸಿದರು.
ಜಿಲ್ಲಾಧ್ಯಕ್ಷರಾದ ರವೀಶ್ ಮಾತುಕತೆಯ ಮೂಲಕ ನೂತನ ಅಧ್ಯಕ್ಷರನ್ನು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಂತರ ಅವಿರೋಧವಾಗಿ ಆಯ್ಕೆಮಾಡಿದರು. ಸ.ಪ್ರೌ.ಶಾಲೆ ಚುಜ್ಜಲಕ್ಯಾತನಹಳ್ಳಿ ಶಾಲೆಯ ಸಹಶಿಕ್ಷಕ ಜಯರಂಗೇಗೌಡ ಉಪಾಧ್ಯಕ್ಷರಾಗಿ, ಹಾಗೂ ಸ.ಬಾ.ಪ್ರೌ, ಶಾಲೆ ಕೆ.ಆರ್.ಪೇಟೆ ಸಹಶಿಕ್ಚಕಿ ಎಂ.ವೇದಾವತಿಯವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎಸ್.ಎಂ. ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜು, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹೆಚ್.ಕೆ.ಮಂಜುನಾಥ್ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಲಿಂಗರಾಜುರವರನ್ನು ಅಭಿನಂದಿಸಿ ಇಲಾಖೆಯಲ್ಲಿ ಸಹಕಾರ ನೀಡುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಯತೀಶ್, ವೆಂಕಟೇಶ್, ಮಂಜೇಗೌಡ, ಪುಟ್ಟರಾಜು ಶಿಕ್ಷಕರಾದ ರಮೇಶ್ ಗಿರೀಶ್, ಧನಂಜಯ್, ವೆಂಕಟೇಶ್, ದೇವರಾಜು, ಭಾಸ್ಕರ್, ರಾಘವೇಂದ್ರರವರು ಹಾಜರಿದ್ದರು. ಶಿಕ್ಷಣ ಸಂಯೋಜಕರುಗಳಾದ ಜ್ನಾನೇಶ್, ಸುರೇಶ ಹಾಜರಿದ್ದರು.