ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ರೋಗದ ಜಾಗೃತಿ ಕಾರ್ಯಕ್ರಮ.

ಸಂಜೆವಾಣಿ ವಾರ್ತೆ
ಸಂಡೂರು:- ಜೂ : 23- ಪಟ್ಟಣದ ಶ್ರೀ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಮಯೋರ್ ಸಂಡೂರು. ಹಾಗೂ ಯೇನೆಪೋಯ  ಮೆಡಿಕಲ್ ಕಾಲೇಜ್  ಆಸ್ಪತ್ರೆ ಮಣಿಪಾಲ್  ಇವರ ಸಂಯುಕ್ತಾಶ್ರಯದಲ್ಲಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ರೋಗದ ಜಾಗೃತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಯನೆಪೋಯ ಆಸ್ಪತ್ರೆಯ ಡಾ|| ಇಬ್ರಾಹಿಂ ನಾಗನೂರ ರವರು ಹಾಗೂ ಸ್ಮಯೋರ್ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ  ಎರಿಯಮ್ಮ  ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಪುರುಷೋತ್ತಮ ಟಿ ಎಂ. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ತೋಂಟದ ಆರಾಧ್ಯ ಬಿ.ಎಸ್. ಹಾಗೂ ಶಿಕ್ಷಕರಾದ  ಗೀತಾ ಪೂಳ್. ರಮೇಶ್. ವೈಶಾಲಿ. ಅಮರ್. ಮಾರುತಿ. ನಾಗರಾಜ್. ಫಾರೂಕ್ ಅಬ್ದುಲ್ಲಾ. ಮಂಜುನಾಥ್. ಶೃತಿ. ಸುಮಲತಾ. ಹಾಜರಿದ್ದರು.
ಇಬ್ರಾಹಿಂ ನಾಗನೂರ ರವರು ತಮ್ಮ ಉಪನ್ಯಾಸದಲ್ಲಿ  ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಶುಚಿತ್ವದ ಬಗ್ಗೆ ಕ್ಯಾನ್ಸರ್ ರೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು ಜೊತೆಗೆ ಪಾಲಕರಿಗೂ ಕೂಡ ಶಾಲೆಯಲ್ಲಿರುವ ಮಕ್ಕಳು ಅವರಿಗೆ ತಿಳುವಳಿಕೆಯನ್ನು  ಹೇಳಬೇಕು ಅದರಿಂದ ಆಗುವ ತೊಂದರೆಯ ಬಗ್ಗೆ ವಿದ್ಯಾರ್ಥಿಗಳು ನೀವು ಅನಕ್ಷರಸ್ಥ ಪಾಲಕರಿಗೆ ತಿಳಿಸಿಹೇಳಬೇಕು ಎಂದು  ಕ್ಯಾನ್ಸರ್ ರೋಗ ಸಂಭವಿಸಿದ ಕೆಲವು ವ್ಯಕ್ತಿಗಳ ಚಿತ್ರಗಳನ್ನು ತೋರಿಸಿ ಮಾರ್ಗದರ್ಶನ ಮಾಡಿದರು ವಿದ್ಯಾರ್ಥಿಗಳು ಕೂಡ ಮುಂದಿನ ದಿನಮಾನಗಳಲ್ಲಿ ಅನಾರೋಗ್ಯದ ಸಮಸ್ಯೆಯನ್ನು ಓಡಿಸುತ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.