ಪ್ರೋಬಸ್ ಕ್ಲಬ್‍ನ ಮಾಸಿಕ ಸಭೆ

ಹುಬ್ಬಳ್ಳಿ,ಮಾ30: ನಗರದ ಗೋಕುಲ ರಸ್ತೆಯ ರಾಜಧಾನಿ ಕಾಲನಿಯಲ್ಲಿರುವ ಪ್ರೋಬಸ್ ಕ್ಲಬ್‍ನ 2021ನೇ ಮಾರ್ಚ್‍ನ ಮಾಸಿಕ ಸಭೆಯನ್ನು ರವಿವಾರ ಕಾಲನಿಯ ಶ್ರೀ ಗಣೇಶ ಮತ್ತು ಈಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಗೋಕುಲ ರಸ್ತೆಯ ಪೋಲಿಸ್ ಠಾಣೆಯ ಸಿಪಿಐ ಅಶೋಕ ಜಿ. ಚವ್ಹಾಣ ಆಗಮಿಸಿ, ಕೋವಿಡ್-19 ರೋಗಗಳ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಸಿದರು.
ನಂತರ ಖ್ಯಾತ ಕಲಾವಿದರಾದ ಶರಣು ಯಮನೂರ ಇವರ ತಂಡದವರಿಂದ ಹಾಸ್ಯೋತ್ಸವ ನಗೆ ಹಬ್ಬ ಕಾರ್ಯಕ್ರಮ ಜರುಗಿತು. ಇದರಲ್ಲಿ ಕೋವಿಡ್-19 ಬಗ್ಗೆ ಜಾನಪದ ಹಾಡನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋಬಸ್ ಕ್ಲಬ್‍ನ ಅಧ್ಯಕ್ಷರಾದ ಎಂ.ಎ. ಹಿರೇಮಠ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಎಲ್. ಹಬೀಬ, ಮಾಜಿ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ, ಚನ್ನಬಸಪ್ಪ ಧಾರವಾಡಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.