ಪ್ರೋತ್ಸಾಹದಾಯಕ ದರದಲ್ಲಿ ಸ್ಲೀಪರ್ ಬಸ್‍ಗಳ ಕಾರ್ಯಾಚರಣೆ

ಕಲಬುರಗಿ,ಅ.29:ಪ್ರಯಾಣಿಕರನ್ನು ಸಂಸ್ಥೆಯ ಸಾರಿಗೆಗಳತ್ತ ಆಕರ್ಷಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಎ.ಸಿ. ಸ್ಲೀಪರ್ ಹಾಗೂ ನಾನ್ ಎ.ಸಿ. ಸ್ಲೀಪರ್ ಬಸ್‍ಗಳನ್ನು ಪ್ರೋತ್ಸಾಹದಾಯಕ ದರವನ್ನು ನಿಗದಿಪಡಿಸಿ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರೋತ್ಸಾಹದಾಯಕ ಪ್ರಯಾಣ ದರ ವಿವರ ಇಂತಿದೆ. ಕಲಬುರಗಿ-ಬೆಂಗಳೂರು ಎ.ಸಿ. ಸ್ಲೀಪರ್ ಪ್ರೋತ್ಸಾಹದಾಯಕ ಪ್ರಯಾಣ ದರ 1050 ರೂ., ಕಲಬುರಗಿ-ಬೆಂಗಳೂರು ನಾನ್ ಎಸಿ ಸ್ಲೀಪರ್ ದರ 950 ರೂ., ಜೇವರ್ಗಿ-ಬೆಂಗಳೂರು ನಾನ್ ಎಸಿ ಸ್ಲೀಪರ್ 930 ರೂ., ಶಹಾಪೂರ-ಬೆಂಗಳೂರು ನಾನ್ ಎಸಿ ಸ್ಲೀಪರ್ 910 ರೂ. ಹಾಗೂ ಸುರಪುರ-ಬೆಂಗಳೂರುನಾನ್ ಎಸಿ ಸ್ಲೀಪರ್ ಪ್ರೋತ್ಸಾಹ ದರ 891 ರೂ. ಗಳನ್ನು ನಿಗದಿಪಡಿಸಲಾಗಿದೆ.