ಪ್ರೋಟೋಟೈಪಿಂಗ್ ಕ್ಯಾಂಪ್ ಗ್ರಾಂಡ್ ಫಿನಾಲೆಗೆ 2 ಶಾಲೆಗಳು ಆಯ್ಕೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಜು.೨೧.: ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಮತ್ತು ಙuತಿಚಿಚಿh ಸಂಸ್ಥೆ ವತಿಯಿಂದ Sಛಿhooಟ iಟಿಟಿovಚಿಣioಟಿ Pಡಿogಡಿಚಿm ಅಡಿಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪ್ರೋಟೋಟೈಪಿಂಗ್ ಕ್ಯಾಂಪ್ ಮತ್ತು ಟಾಪ್ ಐಡಿಯಾ ನೀಡಿ ಗ್ರಾಂಡ್ ಫಿನಾಲೆಗೆ ಜಿಲ್ಲೆಯಿಂದ ನಗರದ ಬಾಲಕರ ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಹೊಸದುರ್ಗ ತಾಲೂಕಿನ ಮಲ್ಲ;ಪ್ಪನಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು  ಬೆಂಗಳೂರಿನ ಕೆಂಗೇರಿಯಲ್ಲಿರುವ ಕ್ರೆöÊಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಡಯಟ್ ನೋಡಲ್ ಅಧಿಕಾರಿ ಯು. ಸಿದ್ದೇಶಿ ತಿಳಿಸಿದರು. ಡಯಟ್ ವತಿಯಿಂದ ಗುರುವಾರ ರಾಜ್ಯಮಟ್ಟದ ಪ್ರೋಟೋಟೈಪಿಂಗ್ ಕ್ಯಾಂಪ್ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿರುವ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ನಗರದ ಬಾಲಕರ ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಸನ್ನ ಕುಮಾರ್, ಗಿರೀಶ್, ಶಿವಕೃಷ್ಣ, ಭಾಸ್ಕರ್ ಶಾಸ್ತಿç ಇವರು ಜಿ.ಟಿ.ನಾಗವೇಣಿ ಮತ್ತು ರವಿಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಮ್ಯಾಗ್ನಟಿಕ್ ಪ್ಯೂಯೆಲ್ ಸೆನ್ಸಾರ್ ಐಡಿಯಾ ಸಿದ್ದಪಡಿಸಿದ್ದು ವಿದ್ಯಾರ್ಥಿಗಳನ್ನು ಕುರಿತು ಐಡಿಯಾ ಬಗ್ಗೆ ಕೇಳಿದಾಗ ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ನಲ್ಲಿ ವಾಹನಗಳಿಗೆ ಪೆಟ್ರೋಲ್/ಡೀಸೆಲ್ ತುಂಬಿಸುವಾಗ ವಾಹನಗಳಿಗೆ ಕೆಲವೊಮ್ಮೆ ಅದಲು ಬದಲಾಗಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬುವುದರಿAದ ವಾಹನದ ಇಂಜಿನ್‌ಗೆ ತೊಂದರೆಯಾಗಬಹುದು. ಈ ರೀತಿಯ ಗೊಂದಲ ಉಂಟಾಗದAತೆ ಆಯಾ ವಾಹನಕ್ಕೆ ಯಾವ ಫ್ಯೂಯೆಲ್ ಹಾಕಬೇಕು ಎನ್ನುವುದನ್ನು ಸೆನ್ಸಾರ್ ಮಾಹಿತಿ ನೀಡುತ್ತದೆ ಎಂದರು. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್, ಸಂದೀಪ್, ದೀಪಿಕಾ, ದಿವ್ಯಶ್ರೀ, ಜೀವನ ಇವರು ಹೆಚ್.ಎಸ್ ವಾಸುದೇವ ಶಿಕ್ಷಕರ ಮಾರ್ಗದರ್ಶನದಲ್ಲಿ Iಟಿಣegಡಿಚಿಣeಜ smಚಿಡಿಣ shoe ಜಿoಡಿ ಚಿ bಟiಟಿಜ ಠಿeಡಿsoಟಿ ಐಡಿಯಾ ಸಿದ್ದಪಡಿಸಿದ್ದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು.ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಆಯ್ಕೆಯಾಗಿರುವ ಶಾಲೆಗಳ ವಿದ್ಯಾರ್ಥಿಗಳು ಮತ್ತು ಮಾರ್ಗಧರ್ಶಿ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.