ಪ್ರೋಜೆಕ್ಟ್ ಸ್ಪರ್ಧೆ: ಕಲಬುರಗಿ ಐಟಿಐಕಾಲೇಜಿನ ತರಬೇತಿದಾರರು ಪ್ರಥಮ ಸ್ಥಾನ

ಕಲಬುರಗಿ.ಜು.15:ವಿಶ್ವ ಯುವ ಕೌಶಲ್ಯ ದಿನಾಚರಣೆ-2022ರ ಅಂಗವಾಗಿ ಜಿಲ್ಲೆಯ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶುಕ್ರವಾರ (ಜುಲೈ 15ರಂದು) ಜಿಲ್ಲೆಯ ಅಂತರ ಐ.ಟಿ.ಐ ಕಾಲೇಜಿಗಳಿಗೆ ಆಯೋಜಿಸಿದ ಪ್ರೋಜೆಕ್ಟ್ ಸ್ಪರ್ಧೆಯಲ್ಲಿ ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿದಾರರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ರುಬೀನಾ ಪರ್ವಿನ್ ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.