ಪ್ರೊ.ವಸಂತ ಕುಷ್ಟಗಿಗೆ ಶ್ರದ್ಧಾಂಜಲಿ

ಕಲಬುರಗಿ:ಜೂ.4: ಶುಕ್ರವಾರ ಬೆಳಿಗ್ಗೆ ನಿಧನರಾದ ನಾಡಿನ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ನಗರದಲ್ಲಿ ಗೌರವಪೂರ್ವಕವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಶ್ರೀಯುತರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಮರೆಯುವಂತಿಲ್ಲ. ಅವರ ಅಗಲಿಕೆ ಕನ್ನಡಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ಬಳಗದ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ಮಾಡಿದ್ದಾರೆಂದು ಸ್ಮರಿಸಿದರು.

ಪ್ರಮುಖರಾದ ನರಸಪ್ಪ ದೇಗಾಂದ ಬಿರಾದಾರ, ಬಸಯ್ಯ ಸ್ವಾಮಿ ಹೊದಲೂರ, ದೇವೆಂದ್ರಪ್ಪ ಗಣಮುಖಿ, ಅಣ್ಣಾರಾಯ.ಎಚ್.ಮಂಗಾಣೆ, ರಾಜಕುಮಾರ ಬಟಗೇರಿ, ಕಾಡಯ್ಯ.ಎಚ್.ಕೆ, ಶಿವಪುತ್ರಯ್ಯ ಸ್ವಾಮಿ ಬೆಣ್ಣೂರ ಇದ್ದರು.