ಪ್ರೊ.ಬಿ ಕೃಷ್ಣಪ್ಪನವರ ವಾಸಿಸಿದ ಮನೆಗೆ ಜಿಲ್ಲಾಧಿಕಾರಿ ಭೇಟಿ


ಹರಿಹರ. ನ.22;  ಅಕಾಲಿಕ ಮಳೆಯಿಂದಾಗಿ   ಕುಸಿದು ಬಿದ್ದಿದ್ದ ಪ್ರೊ ಬಿ ಕೃಷ್ಣಪ್ಪನವರ ವಾಸಿಸಿದ ಮನೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರುದೂರ ದೃಷ್ಟಿಯ ಕಲ್ಪನೆ ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರೊ ಬಿ ಕೃಷ್ಣಪ್ಪ ಅವರು ಶೋಷಿತರ ಶ್ರೇಯಸ್ಸಿಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನೆ ಹುಟ್ಟು ಹಾಕಿದ ಸಮಾಜದ ಚಿಂತಕರು ಪ್ರೊಫೆಸರ್ ಬಿ ಕೆ ರವರು ಒಂದು ಕಾಲದಲ್ಲಿ ಜಾತಿ ವಿನಾಶ ಅಸ್ಪಷ್ಟತೆ ವಿನಾಶ ಸರ್ವರಿಗೂ ಶಿಕ್ಷಣ ಮೌಢ್ಯ ಕಂದಾಚಾರ ವಿನಾಶ ಭೂ ರಹಿತರಿಗೆ ಭೂಮಿ ಹಂಚಿಕೆ ಹೀಗೆ ಹತ್ತು ಹಲವು ವಿಷಯಗಳನ್ನು ಆಧರಿಸಿ  ಡಿಎಸ್ಸೆಸ್ ಸಮಿತಿಯನ್ನು ಹುಟ್ಟುಹಾಕಿ ರಾಜ್ಯದ ಉದ್ದಗಲಕ್ಕೂ ಹೋರಾಟ ಧರಣಿಗಳನ್ನು ಮಾಡುತ್ತ ತುಳಿತಕ್ಕೊಳಗಾದ ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟ ಮೂರು ದಶಕಗಳ ಕಾಲ ಹೋರಾಟವನ್ನು ಉಸಿರಾಗಿಸಿಕೊಂಡದ್ದು ಪ್ರೊಫೆಸರ್ ಬಿ ಕೆ ರವರ ಪರಿಶಿಷ್ಟರ ಕಾಲೋನಿಯಲ್ಲಿ ಹುಟ್ಟಿಬೆಳೆದ ನಾಡಿನಲ್ಲಿ ದಲಿತ ಪ್ರಜ್ಞೆ ಹುಟ್ಟು ಹಾಕಿದವರ ಸ್ಮಾರಕ ವನ್ನು ಕುವೆಂಪು ರವರ ಹುಟ್ಟಿಬೆಳೆದ ಕುಪ್ಪಳಿಯಲ್ಲಿ ಇರುವ  ಮನೆಯನ್ನು ಸ್ಮಾರಕ ಮಾಡಿ ಮಾಡಿರುವ ರೀತಿಯಂತೆ ಹರಿಹರ ನಗರದ ಪರಿಶಿಷ್ಟರ ಕಾಲೊನಿಯಲ್ಲಿ ಪ್ರೊ ಬಿ ಕೃಷ್ಣಪ್ಪನವರು ಹುಟ್ಟಿ ಬೆಳೆದ ಮನೆಯನ್ನು ಸ್ಮಾರಕವನ್ನಾಗಿ ಮಾಡಿದರೆ ಹೋರಾಟಗಾರರಿಗೆ ಪ್ರೇರಣೆಯಾಗುತ್ತದೆ ಮತ್ತು ಅವರ ಸೋದರ ಕುಟುಂಬದ ಸದಸ್ಯರಿಗೆ ಪರ್ಯಾಯವಾಗಿ ಬೇರೆ ಮನೆಯನ್ನು ಮಾಡಿಕೊಡಬೇಕೆಂದು ಪ್ರೊಫೆಸರ್ ಬಿ ಕೆ ರವರ ಸೋದರ ಕುಟುಂಬದ ಸಂಬಂಧಿಕರ ಎಚ್ ನಿಜಗುಣ .ಡಿ ಯಮನಪ್ಪ .ಮಲ್ಲೇಶ್ ಎಚ್.ಸಂತೋಷ್ ನೋಡದವರು . ಹನುಮಂತಪ್ಪ ಆಶ್ರಯ ಕಾಲೊನಿ . .ನಿರಂಜನ್ ಮೂರ್ತಿ .ಕೇಶವ ಕಂಚಿಕೇರಿ .ಕೃಷ್ಣಪ್ಪನವರ ಸೋದರರ ಪುತ್ರರಾದ ಬಸವರಾಜ ಸದಾನಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ದಲಿತರ ಅಹವಾಲುಗಳನ್ನು ಆಲಿಸಿದ ಜಿಲ್ಲಾ ಅಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಕರ್ನಾಟಕ ದಲಿತ ಚಳವಳಿ ಸಾಮಾಜಿಕ ಹೋರಾಟಗಳಲ್ಲಿ ಪ್ರೊಫಸರ್ ಬಿ ಕೆ ಅವರ ಹೆಸರು ಅಜರಾಮರ  ದಲಿತ ಚಳವಳಿಯ ಕೇಂದ್ರ ಶಕ್ತಿಯಾಗಿ ಕೆಲಸ ಮಾಡಿದವರು ಕೃಷ್ಣಪ್ಪನವರು ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸತ್ಯದ ಪರ ಹೋರಾಟವನ್ನು ಮಾಡಬೇಕು ದಲಿತ ಸಮಾಜದ ಹಿರಿಯರು ಕಿರಿಯರು ಮುಖಂಡರುಗಳು ಅವರ ಆದರ್ಶ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಇಂಥ ಮಹಾನ್ ಚೇತನ  ಹೋರಾಟಗಾರ ಪ್ರೊಫೆಸರ್ ಬಿ ಕೃಷ್ಣಪ್ಪನವರ ಸ್ಮಾರಕದ ಬಗ್ಗೆ ಮನವಿ ಪ್ರಸ್ತಾವನೆಗಳು ಯಾವ ಹಂತ ತಲುಪಿದೆ ಎಂಬುದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತೇನೆ ಸಮಾಜದ ಹಿರಿಯರು ಮುಖಂಡರು ನೀವು ನಿಮ್ಮ ಪ್ರಯತ್ನ ಮಾಡಲು ಮುಂದುವರೆಸಿ ನಾನು ಸರ್ಕಾರದ ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರೊಂದಿಗೆ ಪ್ರೊ ಬಿ ಕೆ ರವರ ಸ್ಮಾರಕ ನಿರ್ಮಾಣ ಆಗೋದಕ್ಕೆ ಸತತ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಸ್ಮಾರಕ ನಿರ್ಮಾಣದ ಕಾಯಕಲ್ಪಕ್ಕೆ ಮುಂದಾಗುತ್ತೇನೆ ಎಂದು  ಭರವಸೆ ನೀಡಿದರು ಈ ವೇಳೆ ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ .ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಾಗೀಶ್ ಸ್ವಾಮಿ. ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್. ನಗರಸಭಾ ಸದಸ್ಯ ಎನ್ ರಜಿನಿಕಾಂತ್ .ಆಟೋ ಹನುಮಂತಪ್ಪ .ನಾಮ ನಿರ್ದೇಶನ ಸದಸ್ಯ ಸುರೇಶ ತೆರದಾಳ್ .ಪಿಜಿ ಮಾಲತೇಶ್ ಆರ್ ಶ್ರೀನಿವಾಸ್, ಮಂಜುನಾಥ್ ,ಸದಾಶಿವಪ್ಪ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸಮೀರಾ ಅಹ್ಮದ್, ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ ,ಪರಿಶಿಷ್ಟರ ಕಾಲನಿಯ ಹಿರಿಯರು ಯುವಕರು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಇದ್ದರು.

Attachments area